ಭಗವತಿ ದುರ್ಗಾಪರಮೇಶ್ವರೀ ದೇವಸ್ಥಾನ ಕೆರ್ಗಾಲ್: ದೇಣಿಗೆ ಸಂಗ್ರಹ

 
ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಕಳೆದ ಹದಿನೈದು ದಿನಗಳಿಂದ ಪ್ರತಿ ಬಾನುವಾರ ದಿನಾಂಕ ಜೂನ್ 03, 10, ಹಾಗೂ 17 ರಂದು ದೇವಾಲಯದ ಜೀರ್ಣೋದ್ದಾರದ ಬಗ್ಗೆ ದೇಣಿಗೆ ಸಂಗ್ರಹಕ್ಕಾಗಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ, ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರು ಜೊತೆಯಾಗಿ ಪರಿಸರದಲ್ಲಿ ಸುಮಾರು 225 ಮನೆಗಳಿಗೆ ಭೇಟಿ ನೀಡಿ ಮಾಹಿತಿಯನ್ನೊಳಗೊಂಡ ಪತ್ರವನ್ನು ವಿತರಿಸಿ ದೇಣಿಗೆಯನ್ನು ನೀಡುವಂತೆ ಮನವಿ ಮಾಡಿಕೊಂಡರು.

ಪ್ರತಿಯೊಂದು ಮನೆಯ ಮುಖ್ಯಸ್ಥರು ಸಂತೋಷದಿಂದ ಮನವಿಯನ್ನು ಸ್ವೀಕರಿಸಿ ಸಕಾರಾತ್ಮಕ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಕೆಲವರು ಪ್ರಥಮ ಕಂತಿನ ತಮ್ಮ ದೇಣಿಗೆಯನ್ನು ಪಾವತಿಸಿರುಸುತ್ತಾರೆಂದು ದೇವಾಲಯದ ಆಡಳತ ಮೊಕ್ತೇಸರರಾಗಿರುವ  ಬಿ.ಎಸ್.ಶಾನುಭೋಗ್ ಅವರು ತಿಳಿಸಿರುತ್ತಾರೆ.

ದೇಗುಲ ನಿರ್ಮಾಣದ ಶಿಲ್ಪಿ ಮೊಳಹಳ್ಳಿ ರಾಘವೇಂದ್ರ ಆಚಾರ್ಯ ಅವರಿಗೆ ಈಗಾಗಲೇ ಮುಂಗಡ ಪಾವತಿಯ ಮುಹೂರ್ತವನ್ನು ಮಾಡಲಾಗಿದ್ದು ,ದಿನಾಂಕ 24.06.2018 ರಂದು ದ್ವಿತಿಯ ಕಂತನ್ನು ಪಾವತಿ ಮಾಡವ ವಿಚಾರವನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ  ನರಸಿಂಹ ಪೂಜಾರಿ ಪಡುಕೋಣೆ, ಉಪಾಧ್ಯಕ್ಷರುಗಳಾದ  ವಿಜಯಕುಮಾರ ಶೆಟ್ಟಿ ಖಂಬದಕೋಣೆ, ಡಾ.ಬಾಲಚಂದ್ರ ಭಟ್ಟ ,ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ  ಸುಂದರ ಕೊಠಾರಿ ಇವರು ಜಂಟಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

2018 ಜುಲೈ 01 ರಂದು ಪುನಃ ದೇಣಿಗೆ ಸಂಗ್ರಹ ಅಭಿಯಾನ ಮುಂದುವರಿಯಲಿದ್ದು, ಎಲ್ಲರೂ ನಮ್ಮೊಂದಿಗೆ ಸಹಕರಿಸ ಬೇಕೆಂದು ಪ್ರಧಾನ ಕಾರ್ಯದರ್ಶಿ  ಕೆ.ಪುಂಡಲೀಕ ನಾಯಕ್ ವಿನಂತಿಸಿರುತ್ತಾರೆ.

 

 

Leave a Reply

Your email address will not be published. Required fields are marked *

four × 3 =