ಭಗವದ್ಗೀತಾ ಸಪ್ತಾಹ ಅಭಿಯಾನದ ಪ್ರಯುಕ್ತ ಪೂರ್ವಭಾವಿ ಸಭೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಮೆಟ್ಟಿನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂಜ್ಯ ಶಿರಸಿ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಶ್ರೀಗಳ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ನಡೆಯುವ ಭಗವದ್ಗೀತಾ ಸಪ್ತಾಹ ಅಭಿಯಾನದ ಪ್ರಯುಕ್ತ ಪೂರ್ವಭಾವಿ ಸಭೆ ನಡೆಯಿತು.

Click Here

Call us

Call us

ಸಭೆಯನ್ನುದ್ದೇಶಿಸಿ ಯಳಜಿತ್ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ, ಸಂತ ಮಂಗೇಶ್ ಶೆಣೈ ಮಾತನಾಡಿ ಇಂದಿನ ದಿನಗಳಲ್ಲಿ ತಾಂತ್ರಿಕ ಜೀವನವನ್ನು ಅವಲಂಬಿಸುತ್ತಿರುವ ಪರಿಣಾಮ ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗಿ ರಾಕ್ಷಸರಾಗುತ್ತಿದ್ದೇವೆ. ಇದನ್ನು ನಿಯಂತ್ರಿಸಲು ಪ್ರತಿ ಮನೆಗಳಲ್ಲಿಯೂ ಭಗವದ್ಗೀತೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜೀವನಕ್ಕೆ ಪೂರಕವಾದ ಅಂಶಗಳೇ ಭಗವದ್ಗೀತೆಯ ಸಾರಾಂಶ ಎಂದು ಹೇಳಿದರು.

Click here

Click Here

Call us

Visit Now

ಜಾತಿ, ಮತ, ಸಸ್ಯಾಹಾರಿ, ಮಾಂಸಹಾರಿಗಳೆಂಬ ಭೇಧವಿಲ್ಲದೇ ಏಕಾಗ್ರತೆಯಿಂದ ಧ್ಯಾನಾಸಕ್ತರಾಗಿ ಗೀತಾಪಠಣ ಮಾಡಿದರೆ ಜ್ಞಾನ ಹೆಚ್ಚಾಗುವುದಲ್ಲದೇ ಸಾಂಸಾರಿಕಾ, ವ್ಯಾವಹಾರಿಕಾ ಒತ್ತಡಗಳ ನಿಯಂತ್ರಣಕ್ಕೂ ಸಹಕಾರಿಯಾಗುತ್ತದೆ. ಪಾಪಕರ್ಮ ಮಾಡಿದವರಿಗೂ ಇದರಿಂದ ವಿಮೋಚನಾ ಮಾರ್ಗ ಪಡೆಯಬಹುದಲ್ಲದೆ, ಸೂತಕಾದಿಗಳು ಕೂಡಾ ಇಂದಿಗೂ ವಿಶ್ವ ಮಾನ್ಯವಾಗಿರುವ ಹಾಗೂ ಸೂತ್ರಪ್ರಾಯವಾಗಿರುವ ಮಹಾನ್ ಗ್ರಂಥವನ್ನು ಓದಬಹುದು ಎಂದರು.

ಕಾಲ್ತೋಡು ಗ್ರಾಮ ಪಂಚಾಯತ್ ಸದಸ್ಯೆ ಚೆಂದು ಕುಲಾಲ್ತಿ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಸಂತ ವೈ. ಮಂಗೇಶ್ ಶೆಣೈ ೧೮ ಅಧ್ಯಾಯಗಳ ಗೀತೆಯ ಸಾರಂಶವನ್ನು ವಿವರಿಸಿದರು. ಅವರ ಶಿಷ್ಯವೃಂದದವರು ಮತ್ತು ಸುಮಾರು ೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಟ್ಟಾಗಿ ಭಗವದ್ಗೀತಾ ಪಠಣ ಮಾಡಿದರು. ಕಾಲ್ತೋಡು ಜನಾರ್ದನ ನಾಯಕ್, ಹೇರಂಜಾಲು ನಾಗೇಶ ರಾವ್ ಉಪಸ್ಥಿತರಿದ್ದರು. ಗ್ರಾಮಸ್ಥರು, ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿವೃತ್ತ ಶಿಕ್ಷಕ ಮೆಟ್ಟಿನಹೊಳೆ ಬಡಿಯಾ ಹಾಂಡ ಸ್ವಾಗತಿಸಿ, ನಿರೂಪಿಸಿದರು.

Leave a Reply

Your email address will not be published. Required fields are marked *

14 − 2 =