ಭಗವಧ್ವಜ ವಿವಾದ: ಗ್ರಾ.ಪಂ. ಸದಸ್ಯ ಉದಯಕುಮಾರ್ ತಲ್ಲೂರು ಸ್ಪಷ್ಟನೆ

Call us

Call us

ಕುಂದಾಪುರ: ತಲ್ಲೂರಿನ ಪಾರ್ತಿಕಟ್ಟೆಯಲ್ಲಿ ಕೋಮುಸೌಹಾರ್ದತೆಗೆ ಧಕ್ಕೆ ತರುವಂತಿದ್ದ ಹಾಗೂ ಕಾನೂನು ಬಾಹಿರವಾಗಿ ಅಳವಡಿಲಾಗಿದ್ದ ಭಗವಧ್ವಜವನ್ನು ತೆಗೆದು ಹಾಕಲು ತಲ್ಲೂರು ಗ್ರಾ.ಪಂ. ಅಧ್ಯಕ್ಷರು ಹಾಗೂ ಪಿಡಿಓ ಅವರ ಬಳಿ ಮನವಿ ಮಾಡಿಕೊಂಡ ಬಳಿಕ ಅವರು ಕಾನೂನುಕ್ರಮ ಕೈಗೊಂಡಿದ್ದಾರೆ. ಇಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಯಾವುದೇ ಪ್ರಯತ್ನ ನಡೆಸಿಲ್ಲ. ಆದರೆ ರಾಜಕೀಯ ಪ್ರೇರಿತವಾಗಿ ಸಾಮಾಜಿಕ ತಾಣಗಳಲ್ಲಿ ತನ್ನ ತೇಜೋವಧೆ ಮಾಡಲಾಗುತ್ತಿದೆ ಎಂದಿರುವ ತಲ್ಲೂರು ಗ್ರಾ.ಪಂ. ಸದಸ್ಯ ಉದಯಕುಮಾರ ತಲ್ಲೂರು ಘಟನೆ ಕುರಿತು ‘ಕುಂದಾಪ್ರ ಡಾಟ್ ಕಾಂ’ಗೆ ಸ್ಪಷ್ಟನೆ ನೀಡಿದ್ದಾರೆ.

Click here

Click Here

Call us

Call us

Visit Now

Call us

Call us

ತಲ್ಲೂರು ವಾರ್ಡ್-1ರ ಗಡಿಯಲ್ಲಿ ಹಟ್ಟಿಯಂಗಡಿ ಗ್ರಾಮ ಪಂಚಾಯತಿಗೆ ಸೇರಿದ 9 ಮನೆಗಳಿದ್ದು ಈ ಭಾಗದ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳನ್ನು ತಲ್ಲೂರು ಗ್ರಾಮ ಪಂಚಾಯತ್ ವತಿಯಿಂದಲೇ ಅಭಿವೃದ್ಧಿಪಡಿಸಿತ್ತು. ಹಾಗಾಗಿ ಈ ಭಾಗದಲ್ಲಿ ಧ್ವಜವನ್ನು ಹಾಕುವ ಬಗ್ಗೆ ಪರವಾನಿಗೆ ನೀಡಲು ತಲ್ಲೂರು ಹಾಗೂ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಜಂಟಿ ಸದನ ಸಮಿತಿಯಲ್ಲಿ ತೀರ್ಮಾನ ಅವಶ್ಯ. ಕೇವಲ ಒಂದು ಗ್ರಾಮ ಪಂಚಾಯತಿಯಿಂದ ತಾತ್ಕಾಲಿಕ ಪರವಾನಿಗೆ ಪಡೆದರೇ ಸಾಲದು. ಅಲ್ಲದೇ ಶಾಶ್ವತವಾಗಿ ಬಾವುಟ ಅಳವಡಿಸಲು ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ತಹಶೀಲ್ದಾರರಿಂದ ನಿರಪೇಕ್ಷಣಾ ಪತ್ರದ ಅವಶ್ಯಕತೆ ಕೂಡ ಇರುತ್ತದೆ.

ಧ್ವಜದ ವಿಚಾರದಲ್ಲಿ ತಲ್ಲೂರು ಗ್ರಾಮ ಪಂಚಾಯತ್ ವತಿಯಿಂದ ಕಾನೂನು ರಿತ್ಯಾ ಕ್ರಮ ಕೈಗೊಳ್ಳಲಾಗಿದೆಯೇ ಹೊರತು ಯಾವುದೇ ಧಾರ್ಮಿಕ ಭಾವನೆಯನ್ನು ಕೆರಳಿಸುವ ಕೆಲಸ ಮಾಡಿಲ್ಲ. ಸಂವಿಧಾನಕ್ಕೆ ಬದ್ಧರಾಗಿ, ಸೌಹಾರ್ದಯುವಾಗಿ ಕೆಲಸ ಮಾಡುವುದಷ್ಟೇ ಎಲ್ಲರ ಗುರಿ. ಬಾವುಟದ ವಿಷಯವನ್ನು ರಾಜಕೀಯ ದಾಳವನ್ನಾಗಿಸಿಕೊಂಡು ಅನವಶ್ಯಕವಾಗಿ ತನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದರೇ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಕುಂದಾಪುರ: ತಲ್ಲೂರಿನಲ್ಲಿ ಭಗವಧ್ವಜ ಕಿತ್ತೆಸೆದವರ ವಿರುದ್ಧ ಭಾರಿ ಆಕ್ರೋಶ

Leave a Reply

Your email address will not be published. Required fields are marked *

nine − three =