ಕುಂದಾಪುರ: ಶ್ರೀ ಹಾಗುಳಿ ಸೇವಾ ಸಮಿತಿ ಬಾಳಿಕೆರೆ ನೇತೃತ್ವದಲ್ಲಿ ಶ್ರೀ ಆದಿಮುಡೂರ ಹಾಗುಳಿ, ಚಿಕ್ಕು ಸಪರಿವಾರ ದೈವಸ್ಥಾನ ಬಾಳಿಕೆರೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೆಂಚನೂರು, ಯಕ್ಷಮಿತ್ರ ಬಳಗ ಕೆಂಚನೂರು ಇವರ ಸಂಯುಕ್ತ ಆಶ್ರಯದಲ್ಲಿ ಕೆಂಚನೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಸಾಲಿಗ್ರಾಮ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ದಿ.ಕಾಳಿಂಗ ನಾವಡರ ಒಡನಾಡಿ, ಎರಡು ದಶಕಗಳ ಹಿಂದೆ ಯಕ್ಷಗಾನ ಭಾಗವತರಾಗಿ, ವಿವಿಧ ಪ್ರಯೋಗಗಳನ್ನು ನಡೆಸಿದ ಸದಾಶಿವ ಅಮೀನ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಶ್ರೀ ಆದಿಮುಡೂರ ಹಾಗುಳಿ, ಚಿಕ್ಕು ಸಪರಿವಾರ ದೈವಸ್ಥಾನ ಬಾಳಿಕೆರೆ ಇದರ ನರಸಿಂಹ ಪೂಜಾರಿ ಪಡುಕೋಣೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಬಾಳಿಕೆರೆ, ರವಿ ಗಾಣಿಗ ಕೆಂಚನೂರು, ಚಂದ್ರ ಬಾಳಿಕೆರೆ, ಗುರುರಾಜ್ ಭಟ್ ಶಂಕರಪ್ಪನಕೊಡ್ಲು ಉಪಸ್ಥಿತರಿದ್ದರು.ಕಲಾಭಿಮಾನಿಗಳ ನೆಚ್ಚಿನ ತಾಣವಾದ ಇಲ್ಲಿ ಯಕ್ಷಗಾನಕ್ಕೆ ಉತ್ತಮ ಪ್ರೋತ್ಸಾಹ ದೊರಕುತ್ತಿದ್ದು, ವಜ್ರಮಾನಸಿ ಯಶಸ್ವಿ ಪ್ರದರ್ಶನಕ್ಕೆ ಸಹಕರಿಸಿದ ಮೇಳದ ಕಲಾವಿದರಿಗೂ, ಮೇಳದ ಯಜಮಾನರಿಗೂ, ನೆರೆದ ಪ್ರೇಕ್ಷಕ ವರ್ಗವನ್ನು ಶ್ರೀ ಹಾಗುಳಿ ಸೇವಾ ಸಮಿತಿ ಅಭಿನಂದಿಸಿತು. ಶಿಕ್ಷಕ ವಸಂತರಾಜ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ಸದಾಶಿವ ಅಮೀನ್ ಅವರ ಭಾಗವತಿಕೆ, ವಜ್ರ ಮಾನಸಿ ಯಕ್ಷಗಾನ ಪ್ರದರ್ಶನ ನಡೆಯಿತು.