ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಭಾರತೀಯ ಆಟೋರಿಕ್ಷಾ ಮಜ್ದೂರ್ ಸಂಘ ರಿ. ಇದರ ಸದಸ್ಯರ ಮಕ್ಕಳಿಗೆ ವರ್ಷಂಪ್ರತಿ ನೀಡುವ ವಿದ್ಯಾರ್ಥಿ ವೇತನವನ್ನು ಆರ್.ಎಸ್.ಎಸ್. ಕಾರ್ಯಾಲಯದಲ್ಲಿ ವಿತರಿಸಲಾಯಿತು. ಸಂಘದ ಅಧ್ಯಕ್ಷರಾದ ಸುರೇಶ್ ಪುತ್ರನ್ ಇವರು ಸಂಘದ ಸದಸ್ಯರಲ್ಲಿ ಗ್ರಾಹಕರೊಂದಿಗೆ ಒಳ್ಳೆಯ ಸೌಹಾರ್ಧಯುತವಾಗಿ ನಡೆದುಕೊಳ್ಳುವುದರ ಮುಖೇನ ನಾವು ಸಮಾಜದ ಒಂದು ಅಂಗ. ನಾವಿರುವುದು ಸಮಾಜ ಸೇವೆಗೆ, ಯಾವ ಪ್ರಯಾಣಿಕರು ಯಾವ ಸ್ಥಿತಿಯಲ್ಲಿ ಇರುತ್ತಾರೆಂದು ಹೇಳಲಾಗುವುದಿಲ್ಲ ಆದ್ದರಿಂದ ಯಾರೇ ಕರೆದರು ಬರುವುದಿಲ್ಲ ವೆಂದು ಮಾತ್ರ ಹೇಳಬೇಡಿ, ನಿಮಗೆ ಹೋಗಲಾರದ ಪಕ್ಷದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಕೆ,ಟಿ.ಸತೀಶ್, ಕಾರ್ಯದರ್ಶಿ ಭಾಸ್ಕರ್ ಖಾರ್ವಿ, ಕೋಶಾಧಿಕಾರಿ ರಾಘವೇಂದ್ರ ಹೆಬ್ಬಾರ್, ಸಹ ಕಾರ್ಯದರ್ಶಿ ಶ್ರೀಧರ್ ಮೋಗವೀರ, ಉಪಾಧ್ಯಕ್ಷ ಅಣ್ಣಪ್ಪ ಶೆಟ್ಟಿ ಹಾಜರಿದ್ದರು.