ಭಾರತ್‌ ಬ್ಯಾಂಕ್‌ ಸ್ಟಾಫ್‌ ವೆಲ್ಫೆರ್‌ ಕ್ಲಬ್‌ : ಆರೋಗ್ಯ ಶಿಬಿರ

Call us

ಮುಂಬಯಿ: ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಮುಂಬಯಿ ಲಿಮಿಟೆಡ್‌ ಇದರ ಭಾರತ್‌ ಬ್ಯಾಂಕ್‌ ಸ್ಟಾಫ್‌ ವೆಲ್ಫೆರ್‌ ಕ್ಲಬ್‌ನ ವತಿಯಿಂದ ಆರೋಗ್ಯ ತಪಾಸಣಾ ಶಿಬಿರವು ಮಾ. 23 ರಿಂದ ಮಾ. 29 ರವರೆಗೆ ಎಲ್ಲಾ ಶಾಖೆಗಳಲ್ಲಿ ಆಯೋಜಿಸಲಾಗಿತ್ತು.

Call us

News mumbai bharath bank

Call us

ಶಿಬಿರಕ್ಕೆ ಚಾಲನೆ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದ ನಿರ್ವಹಣಾ ನಿರ್ದೇಶಕ, ಮುಖ್ಯ ಕಾರ್ಯನಿರ್ವಹಕಾಧಿಕಾರಿ ಸಿ. ಆರ್‌. ಮೂಲ್ಕಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ವಸ್ಥ ಸಮಾಜದ ನಿರ್ಮಾಣ ಅನಿವಾರ್ಯವಾಗಿದೆ. ಖನ್ನತೆ, ಒತ್ತಡ ಮತ್ತು ಮಾನಸಿಕ ಕಾಯಿಲೆಗಳನ್ನು ಆರಂಭದಲ್ಲಿಯೇ ಗುರುತಿಸಬೇಕು. ಆವಾಗ ಮಾತ್ರ ಅದು ನಿಯಂತ್ರಕ್ಕೆ ಬರಲು ಸಾಧ್ಯವಾಗುತ್ತದೆ. ಕೌಶಲ್ಯ ಭರಿತ ಸೇವೆಯಲ್ಲಿ ಆರೋಗ್ಯದ ಪಾತ್ರ ಮಹತ್ತರವಾಗಿದೆ. ಭಾರತ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಮತ್ತು ನಿರ್ದೇಶಕ ಮಂಡಳಿಯ ಸಹಕಾರದೊಂದಿಗೆ ಶಿಬಿರವು ಯಶಸ್ವಿಯಾಗಿದೆ. ಸಿಬ್ಬಂದಿ ಹಾಗೂ ಪರಿವಾರದವರು ಸೇರಿ ಸುಮಾರು 600 ಮಂದಿ ಶಿಬಿರದಲ್ಲಿ ಪಾಲ್ಗೊಂಡಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

ಗೌರವ ಪ್ರಧಾನ ಕಾರ್ಯದರ್ಶಿ ಶೀತಲ್‌ ಅಮೀನ್‌, ಜತೆ ಕಾರ್ಯದರ್ಶಿ ಮೋಕ್ಷಾ ಕೋಟ್ಯಾನ್‌, ಮುಖ್ಯ ಮಹಾಪ್ರಬಂಧಕ ಅನಿಲ್‌ ಕುಮಾರ್‌ ಆರ್‌. ಅಮೀನ್‌, ಉನ್ನತಾಧಿಕಾರಿಗಳು, ವೆಲ್ಫೆರ್‌ನ ಎಲ್ಲಾ ಸದಸ್ಯರು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು.

Leave a Reply

Your email address will not be published. Required fields are marked *

seventeen + nineteen =