ಭಾರತ 100 ಕೋಟಿ ಲಸಿಕೆ ವಿತರಣೆ, ಕುಂದಾಪುರ ಕಲಾಕ್ಷೇತ್ರದಲ್ಲಿ ಸಂಭ್ರಮಾಚರಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 100 ಕೋಟಿ ಡೋಸ್ ಕೋವಿಡ್ ಲಸಿಕೆ ಪೂರೈಸಿ ವಿಶ್ವ ದಾಖಲೆಗೈದಿರುವ ಅಂಗವಾಗಿ 45 ದಿನಗಳ ಕಾಲ ನಿರಂತರ ಸ್ವಯಂ ಸೇವಕರಾಗಿ ಕೆಲಸ ಮಾಡಿದ ಸೇವಾಭಾರತಿ ಕಾರ್ಯಕರ್ತರು, ಕಲಾಕ್ಷೇತ್ರ -ಕುಂದಾಪುರ ಸದಸ್ಯರು ಸೇರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರೊಂದಿಗೆ ಕುಂದಾಪುರ ಕಲಾಮಂದಿರದಲ್ಲಿ ಸಂಭ್ರಮವನ್ನು ಆಚರಿಸಿಕೊಳ್ಳಲಾಯಿತು.

Click here

Click Here

Call us

Call us

Visit Now

Call us

Call us

ಈ ಸಂದರ್ಭದಲ್ಲಿ ಪ್ರಾಸ್ತಾವಿಕ ಮಾತನಾಡಿದ ಕಲಾಕ್ಷೇತ್ರ ಅಧ್ಯಕ್ಷ ರಾದ ಬಿ. ಕಿಶೋರ್ ಕುಮಾರ್ ಭಾರತ ಈ ರೀತಿ ಸಾಧನೆಯನ್ನು ಮಾಡಲು ಕೇಂದ್ರ ಸರ್ಕಾರದ ಜೊತೆಗೆ ಸ್ಥಳೀಯವಾಗಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳು, ದಾದಿಯರು, ಹಾಗೂ ಆಶಾ ಕಾರ್ಯಕರ್ತೆಯರ ಶ್ರಮದಿಂದ ಇದು ಸಾಧ್ಯವಾಯಿತು. ನಿಮಗೆಲ್ಲರಿಗೂ ಅಭಿನಂದನೆಗಳು ಎಂದರು.

ಆಸ್ಪತ್ರೆಯ ವೈದ್ಯರಾದ ಡಾ. ನಾಗೇಶ್ ಮಾತನಾಡಿ ಭಾರತ ವಿಶ್ವದಲ್ಲೇ 100 ಕೋಟಿ ಲಸಿಕೆ ವಿತರಣೆ ಮಾಡಿ, ಸಾಧನೆ ಮಾಡಿರುವ ಮೊದಲ ದೇಶವಾಗಿದ್ದು, ಇದಕ್ಕೆ ಕಾರಣ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಾರ್ವಜನಿಕ ರ ಬೆಂಬಲ ಹಾಗೂ ಸೇವಾ ಭಾರತಿ ಕಾರ್ಯಕರ್ತರು, ಕಲಾಕ್ಷೇತ್ರ-ಕುಂದಾಪುರದ ಸದಸ್ಯರು ನಮ್ಮೊಂದಿಗೆ ಕೈಜೋಡಿಸಿ ಸೇವೆ ಮಾಡಿರುವುದರಿಂದ ಈ ಭಾಗದಲ್ಲಿ ಯಶಸ್ಸು ಕಾಣಲು ಕಾರಣವಾಯಿತು ನಿಮ್ಮೆಲ್ಲರಿಗೂ ಅಭಿನಂದನೆ ಎಂದರು.

ಈ ಸಂದರ್ಭದಲ್ಲಿ ಕಲಾಕ್ಷೇತ್ರ ಸದಸ್ಯರಾದ ರಾಜೇಶ್ ಕಾವೇರಿ, ಶ್ರೀಧರ್ ಸುವರ್ಣ, ಗಣೇಶ್ ಭಟ್, ಸಾಯಿನಾಥ್ ಶೇಟ್, ಅನಿಲ್ ಉಪ್ಪೂರು, ಸೇವಾ ಭಾರತಿ ಪ್ರಮುಖರಾದ ಮುರಳೀಧರ ಜಪ್ತಿ, ಸುಹಾಸ್ ಪೈ, ಸತ್ಯ ಕೋಟೇಶ್ವರ, ಅಭಿಷೇಕ್ ಅಂಕದಕಟ್ಟೆ, ವೆಂಕಟೇಶ ಗೋಪಾಡಿ, ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್ ಪೂಜಾರಿ , ರಾಜೇಶ್ ಪೂಜಾರಿ ಬರೆಕಟ್ಟು, ಪ್ರಶಾಂತ್, ಲಕ್ಷೀಷ್ ಉಪಸ್ಥಿತರಿದ್ದರು. ರತ್ನಾಕರ್ ಸ್ವಾಗತ ಮತ್ತು ಧನ್ಯವಾದಗೈದರು.

Leave a Reply

Your email address will not be published. Required fields are marked *

five × four =