ಭಾವನೆಗೆ ಬರವಣೆಗೆ ಕೊಡಿಸಿದವಳು

Call us

Call us

ಅದು ನನ್ನ ಟೀನೇಜ್‌ನ ಸಮಯ. ಆಗ ತಾನೆ ಪಿ.ಯು.ಸಿ.ಮುಗಿಸಿ ಪದವಿಗೆ ಎಂಟ್ರಿಕೊಟ್ಟಿದ್ದೆ. ಪದವಿ ಶಿಕ್ಷಣವೆಂದರೆ ಕೇಳಬೇಕೆ, ಅದೊಂಥರ ಮರೆಯಲಾಗದ ಸವಿದಿನಗಳ ಮಧುರ ಬಾಂಧವ್ಯ ನೀಡುವ ಬೀಡು. ಎಲ್ಲಾ ಹೊಸ-ಹೊಸ ಗೆಳೆಯರ ಗೂಡು ಅದಕ್ಕೆ ಅದರದೇ ಆದಂತ ಗತ್ತು, ಹದಿ ಹರೆಯದ ವಯಸ್ಸಿನ ಹುಡುಗ-ಹುಡುಗಿಯರ ತುಡಿತ-ಮಿಡಿತ, ಓದುವಿಕೆಯ ಒಡನಾಟದ ಜೀವನ, ಲಚ್ಚರ್‌ಗಳ ಪಾಠ, ಟೈಮ್‌ಪಾಸ್‌ ಆಗದಿರೋ ಕ್ಲಾಸ್‌ಗಳು, ಸುಮ್‌ಸುಮ್ನೆ ರೇಗುವಂತೆ ಮಾಡುವ ಕಾಮೆಂಟ್‌ಗಳು, ಬೇಡ ಬೇಡವೆಂದರೂ ಬರುವ ಪರೀಕ್ಷೆಗಳು, ಟೆನ್ಷನ್ ಹಾಲಿಡೇಗಳು, ಕ್ಲಾಸಿಗೆ ಬಂಕ್ ಹಾಕಿ ಚಕ್ಕರ್ ಹೊಡಿಯೋ ಪೋಲಿಗಳು, ಇವುಗಳ ಮಧ್ಯೆಅವರರವರ ಪ್ರೀತಿ-ಪ್ರೇಮಗಳು ಇತ್ಯಾದಿಗಳ ಸಂಗಮವದು…

Call us

Call us

ಇನ್ನೂ ಪದವಿಗೆ ಮೊದಲ ದಿನ ಹೋದಾಗಲಂತೂ ಅದೊಂಥರ ಹೊಸ ಕಥೆ.. ಸೀನಿಯರ್‌ಗಳು ರ‍್ಯಾಗಿಂಗ್ ಮಾಡುತ್ತಾರೋ ಏನೋ ಅನ್ನೋ ಭಯ, ಮೊದಲ ಬಾರಿ ದೊಡ್ಡ ಕಾಲೇಜಿಗೆ ಹೋಗುತ್ತಿದ್ದೆ ಏನಾಗುತ್ತದೋ.. ಹೇಗಿರುತ್ತೋ ಅನ್ನೋ ನಡುಕ, ಹೊಸ ಹೊಸ ಡ್ರಸ್‌ತೊಟ್ಟು ಬರುವ ಹೊಸ ಹೊಸ ಹುಡುಗಿಯರ ಲಕ-ಲಕ ಹೊಳಪು. ಅವರಲ್ಲಿ ಯಾರೊಬ್ಬಳ್ಳಿಗಾದರು ಲೈನ್ ಹಾಕಿ ನಾನೋಬ್ಬ ಭಯಂಕರ ಹುಡುಗ ಎನ್ನಿಸಿಕೋಳ್ಳಬೇಕೆಂಬ ಹುಡುಗರ ಎದೆಗಾರಿಕೆ, ಹುಡುಗರು ನೋಡಲಿ ಅಂತಾನೆ ಕಿರುನಗೆ ಬಿರುತ್ತ.. ಪೋಸ್‌ಕೋಡುವ ಹುಡುಗಿಯರ ಚಮ್ಮಕ್ ಗಳು ಇವೆಲ್ಲ ತುಂಬ ಕಾಮನ್‌ ಅಲ್ವಾ ಆದರೆ ತರಗತಿ ಆರಂಭವಾದ ಸ್ವಲ್ಪ ದಿನ ನಂತರ ಇನ್ನೂ ಹಲವರು ಬದಲಾವಣೆಯನ್ನ ಕ್ಯಾಂಪಸ್‌ನ ಒಳಗಡೇ ನೋಡಬಹುದು.. ಮೊದಲು ಗೆಳೆಯ ಗೆಳತಿಯರಂತೆ ಇದ್ದವರು ಸ್ವಲ್ಪ ದಿನದಲ್ಲೇ ಪ್ರೇಮಿಗಳಾಗಿ ನಾವಿಬ್ಬರು ರತಿ ಮನ್ಮಥರು ಎನ್ನೂವಷ್ಟು ಬದಲಾಗಿರುತ್ತಾರೆ. ದೊಡ್ಡ ದೊಡ್ಡ ಬದುಕ ಬಂಡಿಯನ್ನ ಸಾಗಿಸೋರತರಾ ಕಾರಿನಲ್ಲಿ ಕುಳಿತು ಹರಟೆ ಹೊಡಿಯುತ್ತಿರುತ್ತಾರೆ. ಇನ್ನೂ ಕೆಲವರು ನಾನ್ನೋಬ್ಬನೇ ಪ್ರೇಮಿ, ಅವಳಿಲ್ಲದೇ ನಾ ಬದುಕಲಾರೆ ಎಂದು ಇದ್ದ ಪ್ರೀತಿಯನ್ನುತನ್ನ ಹುಡುಗಿಯ ಬಳಿ ಹೇಳಿ ಕೋಳ್ಳದೇ ತಾಕಳಾಟದಲ್ಲಿ ಕಳೆವ ಕಮಂಗಿಗಳಾಗಿರುತ್ತಾರೆ. ಪ್ಲಿಸ್‌ಕಾಣೆ ನನ್ನ ಪ್ರೀತಿಸು ಅಂತ ಬೇಡುವ ಹುಡುಗರ ಮೇಸೆಜ್‌ಗಳು, ಅವಳಿಗೆ ನನ್ನ ಪ್ರೀತಿ ತಿಳಿಸ್ರೋ ಅನ್ನುವ ಗೆಳೆಯನ ಮಾತುಗಳು, ಲೋ ಅವನ್ನು ನನ್ನ ಹುಡ್ಗಿ ಜೊತೆ ಜೋರಾಗಿ ತಿರುಗಾಡ್ತ ಇದ್ದಾನಂತೆ. ಇವತ್ತು ಅವ್ನ ವಿಚಾರಿಸಿ ಕೊಳ್ಳುತ್ತೇನೆ ಬರಲಿ ಕ್ಲಾಸ್‌ಗೆ ಅನ್ನೋ ಸ್ವಲ್ಪ ಪ್ರೇಮಿಯ ಕೆಟ್ಟ ಕ್ಷಣಗಳು, ಹುಸಿ ನಗೆಯ ಬಿರುತ್ತ ಬಾಣ ಬಿಡುವ ಹುಡುಗಿಯರ ನಗೆಬಾಯಿಯ ಬಿಲ್ಲುಗಳು ಇವುಗಳು ಕೂಡಾ ಒಂಥರಾ ಮಾಮೂಲಿಗಳೇ. ಎನಪ್ಪಾ ಇವನು ಬರೀಕಾಲೇಜು, ಹುಡುಗ-ಹುಡುಗಿಯ ಬಗ್ಗೆ ಹೇಳ್ತಾ ಇದ್ದಾನೆ ಅಂದ್ಕೊಳ್ತಿದ್ದೀರಾ ಹಾಗಾದರೆ ಕೇಳಿ ವಿಷ್ಯಾ ಇರೋದಿಲ್ಲಿ.

Click here

Click Here

Call us

Call us

Visit Now

ಹೌದು! ಅದು ಹುಡುಗ ಹುಡುಗಿಯರ ವಯೋ ಸಹಜಗುಣ. ಆಟ – ಪಾಠವೆಂದುತಿರುಗೋ ವಯಸ್ಸಿನಲ್ಲಿ ಪ್ರೀತಿ ಪ್ರೇಮವೆಂದು ತಿರುಗಾಡೋದು ಆಧುನಿಕತೆಯ ಹೊಸ ಟ್ರೆಂಡ್‌ನಲ್ಲಿ ಒಂಥರಾ ಸಹಜವೆನಿಸುತ್ತದೆ. ಇದೊಂಥರಾ ಮನೋಧರ್ಮ ಅಂಥಹಾ ಒಂದು ಪ್ರೀತಿ ಘಟನೆಯನ್ನ ನನ್ನ ಕಾಲೇಜು ಜೀವನದಲ್ಲಿ ನಾ ಕಂಡಿದ್ದ ಕಥೆಯನ್ನು ಹೇಳುತ್ತೀನಿ ಕೇಳಿ
ಪ್ರೀತಿ-ಪ್ರೇಮ-ಪ್ರಣಯವನ್ನುದ್ವೇಷಿಸುತ್ತಿದ್ದ, ಕಟ್ಟಾ ವಿರೋಧಿಯಾದ ನಾನು ಅದರಗೀಜಿಗೆ ಹೋಗುವುದಿರಲಿ, ಹುಡುಗಿಯರ ಬಳಿ ಮುಖಕೊಟ್ಟು ಮಾತನಾಡುತ್ತಲೂ ಇರುತ್ತಿರಲಿಲ್ಲ.ಬಹುಶಃ ಅದುವರೆಗೆ ಲವ್ ಎಂಬುದು ತಿಳಿದ್ದರೂ ಅದಕ್ಕೆ ನನ್ನ ಮನದಲ್ಲಿ ಸ್ಥಾನವಿಲ್ಲ ಎಂದೇ ಅರುಹುತ್ತಿದ್ದವ ನಾನು, ಬೆಳಿಗ್ಗೆ ಬೇಗ ಎದ್ದು ಮನೆ ಕೆಲಸ ಮಾಡಿ, ಗಡಿಬಿಡಿಯಲ್ಲೆ ಬಸ್‌ಗೆ ಓಡಿ, ತರಾತುರಿಯಲ್ಲಿ ಸೀಟ್ ಹಿಡಿದು, ತನ್ನ ಪಾಡಿಗೆ ತಾನು ಯಾವುದಾದರೂ ಬುಕ್ ಹಿಡಿದು ಓದುತ್ತಾ ಕಾಲೇಜಿಗೆ ಹೋಗಿ ಕ್ಲಾಸ್‌ಲ್ಲಿ ಲೆಕ್ಚರ್ ಪಾಠ, ಫ್ರೀಯಾಗಿದ್ರೆ ಲೈಬ್ರೇರಿಗೆ ಭೇಟಿ ನೀಡಿ ಇಷ್ಟವಾದ ಬುಕ್, ಪೇಪರ್ ಓದಿ ದಿನದೂಡುವುದು ನನ್ನ ಹ್ವಾಬಿ ಆದರೆ ಇದರ ನಡುವೆ ನನಗ್ಯಾವ ಗರ್ಲ್‌ ಫ್ರೆಂಡ್‌ಗಲಿ, ಗೆಳತಿಯರಾಗಲಿ ಇರಲಿಲ್ಲ ಆಥವಾ ಅವರ ಜೊತೆ ಸುತ್ತುತ್ತಾ ಸಮಯ ಹಾಳು ಮಾಡುವ ಮನಸ್ಸು ನನಗಿದ್ದಿರಲಿಲ್ಲ…

ಹೀಗಿರುವಾಗಒಂದು ದಿನ ಗೆಳೆಯರ ಮೂಲಕ ತೇಲ ಬಂದ ವರ್ತಮಾನವೊಂದಕ್ಕೆ ನಾ ಬೆಚ್ಚೆ ಬಿದ್ದೆ. ಅದೇನೂಗೊತ್ತೇ? ಸ್ಯಾಂಡಿ ನಿನ್ನ ಜಾನು ಅಂತಾ ಒಂದ್ ಹುಡ್ಗಿ ಲವ್ ಮಾಡ್ತಾ ಇದ್ಲಂತೆಕಣೋ. ಬಿ.ಎ ಹುಡ್ಗಿಯಂತೆ ಕಣೋ.. ಅವಳ ಫ್ರೆಂಡ್ ನಮಗೆ ಹೆಳಿದ್ರೂ, ಲೋ ನಿನ್ ಲಕ್ಕಿ ಮಗಾ ಎಂಜಾಯ್ ಮಾಡೋ.. ನಮಗೆ ಲವ್ ಬೇಡ ಬೇಡ ಅಂತ ಈಗ ನೀನೆ ಒಳ್ಳೆ ಹುಡುಗಿಯನ್ನ ಪಟಾಯಿಸಿದ್ದೀಯಾ ಬಿಡು ಕ್ಯಾರಿ ಆನ್‌ ಡಿಯರ್‌ಎಂದು ಗೆಳೆಯರು ನಗು-ನಗುತ್ತಾ ಹೇಳಿದ್ದರು.

ಹೇ ಸುಮ್ಮನಿರ್ರೋ ನನ್ನನ್ಯಾವ ಹುಡುಗಿ ಲವ್ ಮಾಡ್ತಾಳೆ, ನಾನೇನಿದ್ದೇನೆ ಅಂತ ಪ್ರೀತಿಸಬೇಕು ಆಕೆ ಎಂದು ಅಲ್ಲಗಳೆಯುವ ಉಸಬರಿ ಮಾಡಿದ್ದೆ. ಆದರೆ ಆ ಹುಡುಗಿಯಾರು.. .ಅವಳ್ಯಾಕೆ ನನ್ನಇಷ್ಟಪಡಬೇಕು, ಅವಳಿಗೆ ಇಷ್ಟವಾಗೋ ಹಾಗೆ ನಾನಿದ್ದೀನಾ ಅವಳಿಗಾದರೂ ನಾನ್‌ ಯಾಕೆ ಇಷ್ಟವಾಗಬೇಕು ಎಂಬೆಲ್ಲ ಪ್ರಶ್ನೆಗಳು ದಿನದಿಂದ ದಿನಕ್ಕೆ ನನ್ನಲ್ಲೆ ಮೂಡುತ್ತಾ, ಮನಸಲ್ಲೆ ಕೊರೆಯುತ್ತಾ ಕ್ರಮೇಣ ಅವಳತ್ತಲೇ ಮನಸ್ಸು ವಾಲುತ್ತಾ ತನ್ನ ಕೆಟ್ಟ ಬುದ್ದಿಯನ್ನು ತೊರಿಸಲು ಸಜ್ಜಾಗುತ್ತಿದ್ದದ್ದು ನನಗೂ ಅರಿವಾಯಿತು ಮುಗ್ಧ ಮನಸ್ಸನಲ್ಲಿ ಅವಳೇ ನೆನಪಾಗುತ್ತಾ ಕ್ರಮೇಣ ನನ್ನಜೀವನ ಶೈಲಿಯೇ ಬದಲಾವಣೆ ಹಾದಿ ಹಿಡಿದಿದ್ದು ನನಗೆ ಗೊತ್ತು ಗೊತ್ತಾಗದೇ ಕಂಡುಬಂದವು.

Call us

ಅವಳು ಹೇಗಿರಬಹುದು, ಯಾರಿರಬಹುದು ಎಂಬ ಕುತೂಹಲದ ನಡುವೆಯೂ .. ನಾಳೆ ಅವಳನ್ನ ನೊಡಲೇಬೇಕು ಎಂಬ ಎಲ್ಲಾ ಹಂಬಲಗಳನ್ನು ಒಟ್ಟುಗೂಡಿಸಿ ಧೈರ್ಯಮಾಡಿಕೊಂಡೆ. ಮರುದಿನ ಬೆಳಿಗ್ಗೆ ನನ್ನ ವರ್ತನೆ ಎಂದಿನಂತಿರಲಿಲ್ಲ. ಇಷ್ಟು ದಿನ ಒಂದು ನಿಮಿಷನೂ ಕನ್ನಡಿಯ ಮುಂದೆ ನಿಲ್ಲದಿದ್ದ ನಾನು ಆ ದಿನ ಯಾಕೋ ತುಸು ಹೆಚ್ಚೆ ಕನ್ನಡಿಯ ಮುಂದೆ ನಿಂತು ವಿಧ ವಿಧದಲ್ಲಿ ಹೇರ್‌ಸ್ಟೆಲ್ ಮಾಡುತ್ತಿದ್ದೆ. ಇದನ್ನ ಗಮನಿಸಿದ ಅಮ್ಮ ಎನಾಯ್ತೋ ನಿನಗೆ ಇವತ್ತು ಬಸ್‌ ಗೆ ಟೈಮ್‌ ಆಗಿದ್ದು ಕಾಣ್ತಾ ಇಲ್ವಾ! ಅಂದಗಾಗಲೇ ಹೋ! ಹೌದ್‌ ಅಲ್ವಾ ಎಂದು ಬಸ್ ಸ್ಟ್ಯಾಂಡ್‌ಗೆ ಓಡಿದ್ದೆ.

ಬಸ್‌ನಲ್ಲಿ ಸೀಟ್ ಇರದೇ ನಿಂತಿದ್ದಾಗ ಇನ್ನೊಂದು ಬಗ್ಗೆಯ ಪ್ರಶ್ನೆ ಮತ್ತೆ ಕಾಡಿತ್ತು.ಅದೆನು ಗೊತ್ತಾ?
ಅವಳನ್ನ ಹೇಗೆ ಗುರುತಿಸುವುದು? ಅವಳನ್ನ ಹೇಗೆ ಮಾತನಾಡಿಸುವುದು?ಎಲ್ಲಿಮಾತನಾಡಿಸುವುದು? ಗೆಳೆಯನಿಗೆ ಹೇಳೊಣ ಎಂದರೆ ಅವನು ಅದನ್ನೇದೊಡ್ಡ ನ್ಯೂಸ್ ಮಾಡಿ ಇಡೀ ಕಾಲೇಜಿಗೆ ತುಂಬಿಸಿದರೆ ಕಷ್ಟ ಎನಿಸಿತ್ತು, ಬೇಡ.
ಯಾವುದು ಬೇಡ ಅವಳ ತರಗತಿಗೆ ಹೋಗಿ ಅವಳ್ಯಾರೆಂದು ತಿಳಿದು ಕೊಳ್ಳೋಣವೆಂದು ಬಸ್ ಇಳಿದ ತಕ್ಷಣವೇ ಈ ಮೊದಲೇ ಪರಿಚಯವಿದ್ದ ನನ್ನ ಗೆಳತಿಯೊಬ್ಬಳ ಬಳಿ ಬಿ.ಎ. ಕ್ಲಾಸ್‌ ಎಲ್ಲಿ, ಸ್ವಲ್ಪ ಹೋಗಬೇಕಿತ್ತು ಎಂದು ಮಾರ್ಗಸೂಚಿ ಪಡೆದೆ. ಇಷ್ಟು ದಿನ ನನ್ನಕ್ಲಾಸ್‌ಗೆ ಹೆಜ್ಜೆ ಹಾಕುತ್ತಿದ್ದ ಪಾದಗಳು ಆ ದಿನ ಸ್ವಲ್ಪ ತಿರುವನ್ನು ಪಡೆದುಕೊಂಡು ಅತ್ತ ಚಲಿಸುತ್ತಿತ್ತು. ಯಾಕೋ ಮನದಲ್ಲಿ ಒಂಥರಾ ಭಯ, ಹೃದಯ ಬಡಿತ ತುಸು ಹೆಚ್ಚೆ ತನ್ನ ಕದರನ್ನು ತೋರಿಸುತ್ತಿತು. ಮುಖದಲ್ಲಿ ಒಂಥರ ಬೆವರು,ಕೈಯಲ್ಲಿ ನಡುಕ.., ಯಾವುದಕ್ಕೂ ಯಾರಿಗೂ ಭಯ ಪಡದ ನಾನು ಯಾಕೆ ಈ ರೀತಿಯಾಗುತ್ತಿದೆ ಎಂದು ತಿಳಿಯದೇ ಮನಸ್ಸನ್ನು ಪದೇ ಪದೇ ಪ್ರಶ್ನಿಸಿದ್ದೆ. ಅಂತಿಮವಾಗಿ ಬಿ.ಎ ತರಗತಿಯ ಒಳಗೆ ಹೋದಾಗ ಅಲ್ಲಿದ್ದ ಗೆಳೆಯರ ಮಾತನಾಡಿಸುವ ನೆಪದಲ್ಲಿ ಆಚೆ-ಈಚೆ ಕಣ್ಣು ಹಾಯಿಸುತ್ತಾ ಯಾರಿರಬಹುದು ಅವಳು? ಎಂದು ಹುಡುಗಿಯರ ಸಾಲಿಗೆ ಕಣ್ಣಾಡಿಸಿದೆ. ಆದರೆ ಎಲ್ಲೂ ಜಾನು ಎನ್ನುವ ನನ್ನಾಕೆ ಕಾಣದೆ ಇದ್ದಾಗ, ನಿಮ್ಮ ತರಗತಿಯಲ್ಲಿ ಜಾನು ಎಂದರೆ ಯಾರೋ ಎಂದು ನನ್ನೊಬ್ಬ ಗೆಳೆಯನ ಕೇಳಿದೆ. ಅದಕ್ಕೆ ಆತ ಅವಳಿಗೆ ಎರಡು ದಿನದಿಂದ ಜ್ವರ ಅಂತೆ ಅವಳು ಕಾಲೇಜಿಗೆ ಬಂದಿಲ್ಲ ಬಹುಶಃ ಆರಾಮಾಗಿಲ್ಲ ಅನ್ನಿಸುತ್ತೆ. ಯಾಕೇ ಅವಳು ನಿಗೆ ಪರಿಚಯವಾ ಎಂದು ಕೇಳಿದ ಹೇ ಇಲ್ಲ ಇಲ್ಲಾ., ಯಾರೋ ಅವಳ ಹೆಸರು ಹೇಳಿದ್ರೂ ಇಷ್ಟವಾಯ್ತು ಆ ಹೆಸರು ಅದಕ್ಕೆ ಕೇಳಿದೆ ಎಂದು ತೀರಾ ನೋವಿಂದ ಹೊರನಡೆದೆ. ಅದೇ ಕೊನೆ ಮತ್ತೇ ಅವಳನ್ನು ನೋಡುವ ಯಾವ ಗೋಜಿಗೂ ಹೋಗಿಲ್ಲ. ಆ ದಿನ ಅವಳಿಗೆ ಜ್ವರ ಅನ್ನೋ ವಿಷಯ ಕೇಳುತ್ತಿದ್ದಂತೆ ಹೃದಯದಲ್ಲಿ ಯಾಕೋ ಒಂಥರದ ನೋವು ನನ್ನನ್ನ ಕಾಡುತ್ತಾ ಇಡೀ ದಿನ ಮನಸ್ಸಲ್ಲಿ ಕೊರೆಯುತ್ತಿತ್ತು. ರಾತ್ರಿ ಮಲಗಿದಾಗಲೂ ಮತ್ತೆ ಮತ್ತೆ ಅವಳದೇ ನೆನಪು ಕಾಡಿ ಕಾಡಿ ಮನದಲ್ಲಿ ಮೂಡುತ್ತಿತ್ತು. ಆಗ ಏನು ಮಾಡಬೇಕೆಂಬುದು ತೋಚದೇ ಧಿಡೀರನೆ ಎದ್ದು ಕುಳಿತ ನನಗೆ ಭಾವನೆಗಳನ್ನ ಬರೆದಿಡೋ ಯೋಚನೆ ಮಾಡೋಣ ಎನಿಸಿ ಬಿಳಿಹಾಳೆ ತೆಗೆದು ಅವಳ ಬಗ್ಗೆ ನನಗಾದ ಮೊದಲ ಒಲವಿನ ಕುರಿತು ಬರೆಯತೊಡಗಿದೆ. ಅದುವರೆಗೂ ಪುಸ್ತಕಗಳನ್ನು ಓದುತ್ತಿದ್ದ ನನಗೆ ಬರವಣಿಗೆಗೆ ಪದಗಳ ಕೊರತೆಯಾಗಲಿ ವಿಷಯದ ಸಮಸ್ಯೆಯಾಗಲಿ ತಲೆದೂರಲಿಲ್ಲ. ಆದರೆ ಅದುವರೆಗೂ ನನ್ನ ಬರವಣಿಗೆಯನ್ನ ಪ್ರಾರಂಭವೇ ಮಾಡದಿದ್ದ ನನಗೆ ಅವಳ ಕಾಣದ ಪ್ರೀತಿಯಿಂದ ಬೆಳಗಾಗುವ ಹೊತ್ತಿಗೆ ಒಂದೊಳ್ಳೆ ಕವನವನ್ನು ರಚಿಸಲು ಪ್ರಚೋದಿಸಿತ್ತು. ಆ ರಾತ್ರಿಯ ನನ್ನೆಲ್ಲಾ ಭಾವನೆಗಳ ಮುಷ್ಠಿಯನ್ನು ಕ್ರೋಢಿಕರಿಸಿ, ಕವಿತೆಯಾಗಿಸಿ, ನಾನೊಬ್ಬ ಪ್ರೇಮಕವಿ ಎನ್ನುವಂತೆ ಪೂರ್ಣಗೊಳಿಸಿದ್ದೆ ಅಲ್ಲಿಂದ ಪ್ರಾರಂಭವಾದ ನನ್ನ ಬರವಣಿಗೆ ಇಂದಿಗೂ ಮುಗಿದಿಲ್ಲ. ಆದರೆ ಒಂದು ಕೆಟ್ಟ ವಿಷಯವೆಂದರೆ ನನ್ನ ಭಾವನೆಗಳಿಗೆ ಬರವಣಿಗೆ ತೋರಿಸಿದ ಆ ಜಾನು ಯಾರು ಎಂದು ಇದುವರೆಗೂ ನಾ ನೋಡಿಲ್ಲ. ಅವಳನ್ನ ನೋಡಬೇಕೆಂಬ ಆಸೆಯೆನಿಲ್ಲ ಆದರೂ ಮರೆಯಲಾರೆ ಆಕೆಯನ್ನ. ಯಾಕೆಂದರೆ ನನಗೆ ಈ ಥರದ ಬಳುಕೋ ಭಾವನೆಗಳು ಯಾವಾಗಲೂ ಬೇಕು. ನನ್ನ ಹೃದಯ ಸದಾ ಮಿಡಿಯುತ್ತಿರಬೇಕು. ಇಂಥಾ ಫೀಲಿಂಗ್ ಗಳೇ ಮೊದಲ ನನ್ನ ಬರವಣಿಗೆಗಳಿಗೆ ಸ್ಫೂರ್ತಿ. ಅವಳನ್ನ ನೋಡಿದರೆ ಆ ಬೇರೆಯದೇ ಭಾವನೆ ಬಂದು ಈ ಮೌನ ಕಚಗುಳಿಗೆ ಧಕ್ಕೆಯಾಗಬಹುದೇನೋ ಅಲ್ಲಾ.. ಅದೇನೆ ಇರಲಿ ಅವಳೆಲ್ಲಿದ್ದರೂ ಚೆನ್ನಾಗಿರಲಿ, ನೋಡುವ ತವಕ ಹೀಗೆ ಇರಲಿ ಎನ್ನುತ್ತಾ ಅವಳ ನೆನಪಲ್ಲಿ ನನ್ನ ಬರಹ ಮೂಡಿಸುತ್ತಾ ಕವಿಯಾಗಿ ಕಾಲ ಕಳೆಯುತ್ತಿರುವೆ ಅನುದಿನ ಅನುಗಾಲ..

ಆದರೊಂದು ಮಾತು,
ನನ್ನ ಬರವಣಿಗೆಗೆ ಸಿಕ್ಕ ದಾರಿ ಅವಳೇ…
ನನ್ನ ಭಾವನೆಗೆ ಬರಣಿಗೆ ನೀಡಿದ ಸ್ಫೂರ್ತಿ ಅವಳೇ…
ಸದಾ ನನ್ನ ಬರಹದಿ ಅವಳ ಬಿಂಬ ಹುಡುಕುವೇ…
ಅವಳಾರೆಂದು ಇನ್ನೂ ತಿಳಿದಿಲ್ಲ ಮತ್ತೆ ಮತ್ತೆ ಗೀಚುವೇ…

One thought on “ಭಾವನೆಗೆ ಬರವಣೆಗೆ ಕೊಡಿಸಿದವಳು

Leave a Reply

Your email address will not be published. Required fields are marked *

seven + seven =