ಭ್ರಮೆಯ ಪೊರೆ ಹರಿಯುವುದೇ ಜ್ಞಾನದ ಮೂಲ – ಯು. ಸಿ. ಹೊಳ್ಳ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಆದಿ ಶಂಕರರು ಜ್ಞಾನದ ಪರಾಕಾಷ್ಠೆಯ ಕುರಿತು ವಾದಿಸುತ್ತಲೇ ಆ ಜ್ಞಾನ ಪ್ರಾಪ್ತಿಗೆ ಭಗವತ್ ಕೃಪೆ ಹೊಂದಲು ಭಕ್ತಿರಸ ಭರಿತ ಸ್ತೋತ್ರ ಸಾಹಿತ್ಯದ ಭಂಡಾರವನ್ನೇ ಸೃಷ್ಟಿಸಿದರು. ಭಕ್ತಿ ಮತ್ತು ಜ್ಞಾನ ಊರ್ಧ್ವಮಖಗಮನಕ್ಕೆ ಎರಡು ರೆಕ್ಕೆಗಳಿದ್ದಂತೆ ಎಂದು ತತ್ತ್ವ ಜ್ಞಾನಿಗಳ ದಿನಾಚರಣೆ – ಶಂಕರ ಭಗವತ್ಪಾದಕರ ಜಯಂತಿ ಉತ್ಸವಾಚರಣೆಯ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ತಿಳಿಸಿದರು.

ಸಮಾರೋಪ ಭಾಷಣ ಗೈದ ಸುವಿಚಾರ ಬಳಗ ಟ್ರಸ್ಟ್ ರಿ. ನ ಅಧ್ಯಕ್ಷ ಬಿ. ರಾಮಕೃಷ್ಣ ಶೇರುಗಾರ ಮಾತನಾಡುತ್ತ ಆಧ್ಯಾತ್ಮ – ತತ್ತ್ವ ಜ್ಞಾನಿಗಳಲ್ಲಿ ಆಸಕ್ತ ಜನರ ಸಂಖ್ಯೆ ಸೀಮಿತವಾಗಿದ್ದರೂ, ಅಂಧಕಾರದಲ್ಲಿ ದೀಪ ಭೆಳಗುವಂತೆ ಅಂಥವರ ಪ್ರಭಾವ ಅಪಾರವಾಗಿರುತ್ತದೆ. ’ಸಜ್ಜನರ ಸಂಘ ಹೆಜ್ಜೇನು ಸವಿದಂತೆ’ ಎಂಬ ನುಡಿಯಂತೆ ಜೀವನ ಮೌಲ್ಯಗಳನ್ನು ಪಾಲಿಸುತ್ತ ಗುರಿಯತ್ತ ಸಾಗುವುದರಿಂದ ಜನಕಲ್ಯಾಣ ಸಾಧ್ಯ ಎಂದರು.

ಶಂಕರ ಜಯಂತಿಯ ಪ್ರಯುಕ್ತ ಶಂಕರ ತತ್ತ್ವ- ಆದರ್ಶಗಳ ಕುರಿತು ಪಡುವರಿ ಪಂಚಲೀಗೇಶ್ವರೀ ದೇವಸ್ಥಾನದ ವೇ.ಮೂ. ನಾಗರಾಜ ಜೋಷಿಯವರು ಉಪನ್ಯಾಸ ನೀಡಿದರು.

ನಾಗಪುರ ಬ್ರಾಹ್ಮಣ ವರ್ಗದ ನಾಗೂರು ಒಡೆಯರಮಠದ ಜ್ಯೋತಿಷಿ ವೇ.ಮೂ. ವಿಶ್ವನಾಥ ಉಡುಪರನ್ನು ಒಡೆಯರಮಠದ ಸಾನ್ನಿಧ್ಯ ವೃಧ್ಧಿಸುವಲ್ಲಿ, ಪರಂಪರೆಯ ಮುಂದುವರಿಕೆಗೆ ವಿಶೇಷ ಕೊಡುಗೆ ನೀಡುದುದಕ್ಕಾಗಿ ವಿಳಂಬಿನಾಮ ಸಂವತ್ಸರ ಶಂಕರ ಜಯಂತಿಯ ಸಮಾರಂಭದ ವಿದ್ವತ್ ಸನ್ಮಾನ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯ್ತು.

ಆರಂಭದಲ್ಲಿ ವಿಪ್ರರಂಜನಿ ಬಳಗ ಉಪ್ಪುಂದದ ಸದಸ್ಯೆಯರು ಶಂಕರಾಚಾರ್ಯರು ಹಾಗೂ ಪರಂಪರೆಯ ಯತಿಗಳು ರಚಿಸಿದ ಸೋತ್ರಗಳನ್ನು ಸುಶ್ರಾವ್ಯವಾಗಿ ಹಾಡಿದರು.

ಶಾಲಿನಿ ಭಟ್ ಶಂಕರಾಚಾರ್ಯರು ಮತ್ತು ಗುರುಪರಂಪರೆಯ ಕುರಿತು ಮಾತನಾಡಿದರು. ಯು. ಗಣೇಶ್ ಪ್ರಸನ್ನ ಮೈಯ್ಯ ನಿರೂಪಿಸಿದರು. ಸಂದೇಶ ಭಟ್ ಸ್ವಾಗತಿಸಿದರು. ವಿ.ಹೆಚ್. ನಾಯಕ್ ವಂದಿಸಿದರು.

 

Leave a Reply

Your email address will not be published. Required fields are marked *

thirteen − nine =