ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಮಾನವ ಹಕ್ಕು ಘಟಕ, ಭ್ರಷ್ಟಾಚಾರ ನಿಗ್ರಹ ದಳ, ಪೊಲೀಸ್ ಠಾಣೆ, ಉಡುಪಿ ಜಿಲ್ಲೆ ಹಾಗೂ ಯುವ ಸ್ಪಂದನ ಕೇಂದ್ರ, ಉಡುಪಿ ಇವರ ಜಂಟಿ ಆಶ್ರಯದಲ್ಲಿ ’ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಯುವ ಜನತೆಯ ಪಾತ್ರ’ದ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.
ಭ್ರಷ್ಟಾಚಾರ ನಿಗ್ರಹ ದಳದ ನಿರೀಕ್ಷಕ ಶ್ರೀ ಜಯರಾಮ ಡಿ. ಗೌಡ ಮಾತನಾಡಿ, ಭ್ರಷ್ಟಾಚಾರದ ಪರಿಕಲ್ಪನೆ ಕೇವಲ ಲಂಚಕ್ಕೆ ಸೀಮಿತವಾಗಿರದೆ, ಬದುಕಿನ ಪ್ರತಿ ಮಜಲುಗಳಲ್ಲೂ ಪ್ರಚುರಗೊಳ್ಳುವುದು. ಯುವ ಸಮುದಾಯ ಸಾಮಾಜಿಕ ತತ್ವ – ಮೌಲ್ಯಗಳಿಗನುಗುಣವಾಗಿ ಬದುಕನ್ನು ರೂಪಿಸಿಕೊಂಡು, ಅನ್ಯಾಯದ ವಿರುದ್ಧ ದನಿಯೆತ್ತ ಬೇಕಿದೆ ಎಂದರು.
ಸತೀಶ್ ಬಿ. ಭ್ರಷ್ಟಾಚಾರ ನಿಗ್ರಹ ದಳದ ನಿರೀಕ್ಷಕ, ಮಾತನಾಡಿ, ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣವು ಶಿಕ್ಷಿತ, ನೈತಿಕ ಬಲ ಹಾಗೂ ಸಾಮಾಜಿಕ ಜವಾಬ್ದಾರಿಯುಳ್ಳ ಯುವ ಶಕ್ತಿಯನ್ನು ಆಧರಿಸಿದೆ ಎಂದರು. ಬಳಿಕ ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಯುವ ಸ್ಪಂದನ ಕೇಂದ್ರದ ಯುವ ಪ್ರವರ್ತಕ ನರಸಿಂಹ ಗಾಣಿಗ ಪ್ರಾಸ್ತಾವಿಸಿದರು. ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಮಾನವ ಹಕ್ಕು ಘಟಕದ ಸಂಯೋಜಕಿ ಅವಿತಾ ಕೊರೆಯಾ, ಸಹ ಸಂಯೋಜಕಿ ವನಿತಾ ಜಿ. ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕಾವ್ಯಾ ಸ್ವಾಗತಿಸಿ, ಅಶ್ವಿನಿ ವಂದಿಸಿ, ಪ್ರಿಯಾ ನಿರೂಪಿಸಿದರು.