ಮಂಗಳಯಾನ 2ವರ್ಷ ವಿಳಂಬ

Call us

Call us

ಮಂಗಳನ ಅಂಗಳಕ್ಕೆ ಮಾನವನನ್ನು ಕಳುಹಿಸುವ ಉದ್ದೇಶ ಹೊಂದಿರುವ ಮಾರ್ಸ್ ಒನ್ ಏಕಮುಖಿ ಯಾನ ಎರಡು ವರ್ಷ ವಿಳಂಬವಾಗಲಿದೆ. ಮೊದಲ ಮಾನವ ಯಾನ 2024ರ ಬದಲಾಗಿ 2026 ರಲ್ಲಿ ಹೊರಟು ಎಲ್ಲವೂ ಲೆಕ್ಕಾಚಾರದಂತೆ ನಡೆದರೆ 2027ರಲ್ಲಿ ಅಂಗಾರಕನ ಅಂಗಳದಲ್ಲಿ ಕಾಲೂರಲಿದೆ.

Click Here

Call us

Call us

ಮಾನವನ ಉಳಿವಿಗೆ ಅನುಕೂಲಕರ ಪರಿಸ್ಥಿತಿ ಇದೆಯೇ ಎಂಬುದನ್ನು ಪರೀಕ್ಷೆಗೆ ಒಳಪಡಿಸಲು 2018ರಲ್ಲಿ ರೊಬಾಟಿಕ್ ಯಾನವನ್ನು ಯೋಜಿಸಲಾಗಿತ್ತು ಆದರೆ ಹಣಕಾಸಿನ ಮುಗ್ಗಟ್ಟಿನಿಂದಾಗಿ ಇದು ಎರಡು ವರ್ಷ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಯಾನದ ಎಲ್ಲಾ ಕಾರ‌್ಯಗಳೂ 2 ವರ್ಷ ಮುಂದಕ್ಕೆ ಹೋಗಿವೆ ಎಂದು ನೆದರ್‌ಲ್ಯಾಂಡ್ ಮೂಲದ ಎನ್‌ಜಿಒ ಮಾರ್ಸ್ ಒನ್ ತಿಳಿಸಿದೆ.

Click here

Click Here

Call us

Visit Now

ಮಂಗಳನೆಡೆಗಿನ ಏಕಮುಖ ಪ್ರಯಾಣಕ್ಕೆ ಭಾರತದ ಮೂವರು ಸೇರಿದಂತೆ ಒಟ್ಟು 100 ಮಂದಿ ಆಯ್ಕೆಯಾಗಿದ್ದು, ಅದರಲ್ಲಿ 24 ಮಂದಿಗೆ ತರಬೇತಿ ನೀಡಲಾಗುವುದು. ಆದರೆ ಕಡೆಯದಾಗಿ ನಾಲ್ಕು ಮಂದಿ ಮಂಗಳನತ್ತ ಪ್ರಯಾಣ ಬೆಳೆಸಲಿದ್ದಾರೆ.

ಸೆಂಟ್ರಲ್ ಫ್ಲೋರಿಡಾದಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುತ್ತಿರುವ ತರಣ್ಜೀತ್ ಸಿಮಗ್ ಭಾಟಿಯಾ (29), ದುಬೈನಲ್ಲಿ ವಾಸಿಸುತ್ತಿರುವ ರಿತಿಕಾ ಸಿಂಗ್ (29) ಮತ್ತು ಕೇರಳದ ಶಾರದಾ ಪ್ರಸಾದ್ (19) ಮಂಗಳನ ಅಂಗಳಕ್ಕೆ ಹೋಗುವ ಏಕಮುಖ ಪ್ರಯಾಣಕ್ಕೆ ಆಯ್ಕೆಯಾದ 100 ಮಂದಿಯ ಪಟ್ಟಿಯಲ್ಲಿರುವ ಭಾರತೀಯರು.

Leave a Reply

Your email address will not be published. Required fields are marked *

nineteen + seventeen =