ಮಂಡಳ್ಳಿ ಗರಡಿಮನೆ ಚತುಃ ಪವಿತ್ರ ನಾಗಮಂಡಲ ಚಪ್ಪರ ಮುಹೂರ್ತ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರ ತಾಲೂಕು ಬಿದ್ಕಲ್‌ಕಟ್ಟೆ ಸಮೀಪದ ಮಂಡಳ್ಳಿ ಗರಡಿಮನೆಯ ಮೂಲ ನಾಗಬನದಲ್ಲಿ ಎ. 16ರಂದು ನಡೆಯುವ ಚತುಃಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಚಪ್ಪರ ಮುಹೂರ್ತ ಕಾರ್ಯಕ್ರಮವು ಪ್ರಧಾನ ಅರ್ಚಕ ಕಲ್ಕಟ್ಟೆ ಗೋಪಾಲಕೃಷ್ಣ ಅಡಿಗ ಅವರ ಮಾರ್ಗದರ್ಶನದಲ್ಲಿ ಜರಗಿತು.

Call us

Call us

Click Here

Visit Now

ಈ ಸಂದರ್ಭದಲ್ಲಿ ಸುರೇಶ ಬಿ. ಶೆಟ್ಟಿ ಹೊಟೇಲ್‌ ಮರಾಠ ಥಾಣೆ, ಗರಡಿಮನೆ ಎಚ್‌. ಭಾಸ್ಕರ ಶೆಟ್ಟಿ, ಕುಟುಂಬದ ಹಿರಿಯರಾದ ಗರಡಿಮನೆ ನಾರಾಯಣ ಶೆಟ್ಟಿ ದಂಪತಿ, ಎಂ. ಗಣೇಶ ಶೆಟ್ಟಿ ಗರಡಿಮನೆ, ವೈ. ಮಂಜುನಾಥ ಶೆಟ್ಟಿ ಯಡಾಡಿ, ನ್ಯಾಯವಾದಿ ಭುಜಂಗ ಶೆಟ್ಟಿ ಗಾವಳಿ, ಶಂಕರ ಶೆಟ್ಟಿ ಬೆರ್ಮಕ್ಕಿ, ಚಂದ್ರಶೇಖರ ಶೆಟ್ಟಿ ಹೆಂಗವಳ್ಳಿ, ಸುಭಾಷ ಶೆಟ್ಟಿ ಗಿಳಿಯಾರು, ಸೀತಾರಾಮ ಶೆಟ್ಟಿ ಮಂಡಳ್ಳಿ, ವಿಶ್ವನಾಥ ಶೆಟ್ಟಿ ಮಂಡಳ್ಳಿ, ಶಿಕ್ಷಕ ರಾಜೀವ ಶೆಟ್ಟಿ ಹಾಡಿಮನೆ, ಚಂದ್ರಶೇಖರ ಶೆಟ್ಟಿ ಚೆನ್ನೆಜಡ್ಡು, ಗ್ರಾಮೀಣ ಬ್ಯಾಂಕ್‌ ಹಳ್ಳಾಡಿಯ ರಾಜೀವ ಶೆಟ್ಟಿ, ವಿಶ್ವನಾಥ ಶೆಟ್ಟಿ ಗರಡಿಮನೆ, ಬಾಲಚಂದ್ರ ಶೆಟ್ಟಿ ಬಸ್ರೂರು, ನರಸಿಂಹ ಶೆಟ್ಟಿ ಯಡಾಡಿ, ದೀನಪಾಲ್‌ ಶೆಟ್ಟಿ ಮೊಳಹಳ್ಳಿ, ಮೇರ್ಡಿ ಸತೀಶ ಹೆಗ್ಡೆ, ಅತುಲ್‌ ಕುಮಾರ್‌ ಶೆಟ್ಟಿ ಜನ್ನಾಡಿ, ನರಾಡಿ ಬಾಲಕೃಷ್ಣ ಹೆಗ್ಡೆ, ರಾಘವೇಂದ್ರ ಅಡಿಗ ಕಲ್ಕಟ್ಟೆ, ನ್ಯಾಯವಾದಿ ಜಯಚಂದ್ರ ಶೆಟ್ಟಿ, ಶಿವರಾಮ ಉಡುಪ ಸಾಲಿಗ್ರಾಮ ಹಾಗೂ ನಾಗಮಂಡಲ ಉತ್ಸವ ಸಮಿತಿಯ ಸರ್ವ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Click here

Click Here

Call us

Call us

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಎ.11ರಂದು ಬೆಳಗ್ಗೆ 8.30ಕ್ಕೆ ಉಗ್ರಾಣ ಮುಹೂರ್ತ, ಎ.12ರಂದು ಸರ್ಪ ಸಂಸ್ಕಾರ ಕ್ರಿಯಾರಂಭ, ಎ. 15ರಂದು ಸರ್ಪ ಸಂಸ್ಕಾರ ಸಮಾಪನ, ರಾತ್ರಿ ಆಶ್ಲೇಷ ಬಲಿ, ಎ. 16ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಸಂಜೆ 7.30ಕ್ಕೆ ಹಾಲಿಟ್ಟು ಸೇವೆ, ರಾತ್ರಿ 9ಕ್ಕೆ ಚತುಃ ಪವಿತ್ರ ನಾಗಮಂಡಲ ಸೇವೆ ಅನಂತರ ಮಂಡಲ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರಗಲಿವೆ.

ಎ. 16ರಂದು 11.30ರಿಂದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುರೇಶ ಶೆಟ್ಟಿ ಶಂಕರನಾರಾಯಣ ಬಳಗದವರಿಂದ ಶಿವ ಪಂಚಾಕ್ಷರಿ ಮಹಿಮೆ ಯಕ್ಷಗಾನ ಜರಗಲಿದ್ದು ಎ. 14ರಂದು ನಾಗಮಂಡಲೋತ್ಸವದ ಹೊರೆಕಾಣಿಕೆಯನ್ನು ದೇವರ ಸನ್ನಿಧಿಗೆ ಸಲ್ಲಿಸಬಹುದೆಂದು ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

 

Leave a Reply

Your email address will not be published. Required fields are marked *

thirteen + five =