ಮಕ್ಕಳ ಶೈಕ್ಷಣಿಕ ಪ್ರಗತಿ ಗಮನಿಸಿ: ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಕ್ಕಳಿಗೆ ಮನೆಯಲ್ಲಿ ಉತ್ತಮ ನಡವಳಿಕೆ ಕಲಿಸಬೇಕು. ಅವರ ಶೈಕ್ಷಣಿಕ ಬೆಳವಣಿಗೆ ಬಗ್ಗೆ ಪೋಷಕರು ನಿರಂತರ ಗಮನಹರಿಸಬೇಕು’ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಕಾಲ್ತೋಡು ಮೆಟ್ಟಿನಹೊಳೆ ಜೈನಜಟ್ಟಿಗೇಶ್ವರ ಸಪರಿವಾರ ದೈವಸ್ಥಾನದ ವಾರ್ಷಿಕ ಹಾಲುಹಬ್ಬದ ಪ್ರಯುಕ್ತ ಕೋಟೇಶ್ವರ ರೋಟರಿ ಕ್ಲಬ್ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

Call us

ದೈವಸ್ಥಾನದ ಆಡಳಿತ ಮಂಡಳಿಯ ಎನ್. ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಎಂ. ಮುಂದಿನಮನಿ, ಜಿಲ್ಲಾ ಪಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ, ವಲಯ ಸಂಘದ ಅಧ್ಯಕ್ಷ ಶೇಖರ ಪೂಜಾರಿ, ಸಹಕಾರ್ಯದರ್ಶಿ ಮಂಜುನಾಥ ದೇವಾಡಿಗ, ಬೋಳಂಬಳ್ಳಿ ದೇಗುಲದ ಆಡಳಿತ ಧರ್ಮದರ್ಶಿ ಧನಂಜಯ ಜೈನ್, ಬೈಂದೂರು ಅಡಿಗಳಹಿತ್ಲು ಮರ್ಲಿ ದೇವಾಡಿಗ, ಶೇಖರ ಶೆಟ್ಟಿ ಅಲ್ಸಾಡಿ, ಜಗನ್ನಾಥ ಕುಲಾಲ್, ಶಾರದಾ ಕುಲಾಲ್, ದರ್ಶನ ಪಾತ್ರಿ ಸುಬ್ಬಯ್ಯ ದೇವಾಡಿಗ, ಪಿಎಸ್ಐ ಪ್ರವೀಣ ಶೆಟ್ಟಿ ನೆಲ್ಯಾಡಿ, ಇವರನ್ನು ಗೌರವಿಸಲಾಯಿತು.

ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಶಿಕ್ಷಕ ಗೋವಿಂದ ಬಿಲ್ಲವ ಉಪನ್ಯಾಸ ನೀಡಿದರು. ರೋಟರಿ ಅಧ್ಯಕ್ಷ ಪಿ. ಕೆ, ಕೃಷ್ಣಮೂರ್ತಿ,ಉದ್ಯಮಿ ಎನ್. ಅಶೋಕ ಶೆಟ್ಟಿ ಹುಬ್ಬಳ್ಳಿ, ಸೀತಾರಾಮ ಕುಲಾಲ್, ಭರತ್ ಪೈ ಇದ್ದರು.

Leave a Reply

Your email address will not be published. Required fields are marked *

five × 5 =