ಮಗನ ಸಾವಿನಿಂದ ನೊಂದ ತಾಯಿಯೂ ಆತ್ಮಹತ್ಯೆಗೆ ಶರಣು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಗನ ಸಾವಿನಿಂದ ತೀವ್ರವಾಗಿ ನೊಂದಿದ್ದ ತಾಯಿಯೊಬ್ಬಳು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ನಾಡ ಗ್ರಾಮದಲ್ಲಿ ವರದಿಯಾಗಿದೆ. ನಾಡದ ಚಿಕ್ಕು ಮಡಿವಾಳ್ತಿ (೪೮) ಸಾವಿಗೆ ಶರಣಾದವರು.

Click Here

Call us

Call us

ತಿಂಗಳ ಹಿಂದೆ ಮನೆಯ ಸಮೀಪದ ಹಾಡಿಯೊಂದರಲ್ಲಿ ಮಗ ಮಂಜುನಾಥ ನೇಣು ಬಿಗಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮದುವೆಗೆ ಕೆಲವು ದಿನಗಳಷ್ಟೇ ಬಾಕಿ ಇರುವಾಗ ಇದ್ದ ಒಬ್ಬನೇ ಮಗ ಇದ್ದಕ್ಕಿದ್ದಂತೆ ನೇಣಿಗೆ ಕೊರಳೊಡ್ಡಿದ ಬಳಿಕ ತೀವೃ ನೊಂದುಕೊಂಡಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಮಗ ಮನೆಯಲ್ಲಿ ಇದ್ದವನು ಏಕಾಏಕಿ ನೇಣಿಗೆ ಶರಣಾಗಿದ್ದರಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ಚಿಕ್ಕು ಅವರಿಗೆ ದಿಕ್ಕು ತೋಚದಂತಾಗಿತ್ತು. ಆತನ ಸಾವಿನ ನಂತರ ಅವರನ್ನು ಕೆಲದಿನಗಳ ಕಾಲ ಬೆಂಗಳೂರಿನ ಸಂಬಂಧಿಯೋರ್ವರ ಮನೆಗೆ ಕರೆದೊಯ್ಯಲಾಗಿತ್ತು. ಆದರೆ ಎರಡು ದಿನಗಳ ಹಿಂದಷ್ಟೇ ಮರಳಿ ಕೋಟೇಶ್ವರದ ತನ್ನ ತಂಗಿಯ ಮನೆಗೆ ಬಂದ ಅವರು ಭಾನುವಾರ ಬೆಳಿಗ್ಗೆ ನಾಡದ ತನ್ನ ಮನೆಗೆ ಮರಳಿ ಬಂದಿದ್ದರು. ಆಕೆ ಮಧ್ಯಾಹ್ನದ ವೇಳೆಗೆ ಮನೆಯ ಮಾಳಿಗೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click here

Click Here

Call us

Visit Now

Read this: ನಾಡಾ: ಹಸೆಮಣೆ ಏರಬೇಕಿದ್ದ ಯುವಕ ನೇಣಿಗೆ ಶರಣು – http://kundapraa.com/?p=13381 

Leave a Reply

Your email address will not be published. Required fields are marked *

16 − 6 =