ಮದುವೆಯಾದ ಮಗಳು ಪ್ರಿಯಕರನೊಂದಿಗೆ ಪರಾರಿ. ನೊಂದ ತಾಯಿ ಆತ್ಮಹತ್ಯೆ

Call us

ಬೈಂದೂರು: ಮಗಳು ನಾಪತ್ತೆಯಾಗಿದ್ದರಿಂದ ಮನನೊಂದು ಮನನೊಂದ ಆಕೆಯ ತಾಯಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಜೂರು ಗ್ರಾಮದ ಬವಳಾಡಿ ಎಂಬಲ್ಲಿ ನಡೆದಿದೆ. ಬವಳಾಡಿಯ ನಿವಾಸಿ ಪಾರ್ವತಿ (46) ಆತ್ಮಹತ್ಯೆಗೆ ಶರಣಾದ ದುರ್ದೈವಿ.

Call us

Call us

ಘಟನೆಯ ವಿವರ:
ಬವಳಾಡಿಯ ಮೃತ ಪಾರ್ವತಿ ಅವರ ಮಗಳ ವಿದ್ಯಾಶ್ರಿ (22) ಕಳೆದ ಎರಡು ವರ್ಷದ ಹಿಂದೆ ಅಲ್ಬಾಡಿ ಗ್ರಾಮದ ಆರ್ಡಿಯ ಯುವಕನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆಕೆ ಈ ವಿವಾಹಕ್ಕೆ ಮುನ್ನವೇ, ಮುರ್ಡೇಶ್ವರದ ನಾಡವರಕೇರಿ ನಿವಾಸಿ ರವಿ ಮಂಜು ಶೆಟ್ಟಿ (24) ಎಂಬುವವನು ಪರಸ್ಪರ ಪ್ರೀತಿಸುತ್ತಿದ್ದರು. ಜ.26ರಂದು ತನ್ನ ತವರು ಮನೆಯಿಂದ ಆರ್ಡಿಯಲ್ಲಿರುವ ಗಂಡನ ಮನೆಗೆ ಹೋಗಿಬರುತ್ತೇನೆ ಎಂದು ಹೊರಟ ಆಕೆ ಅಲ್ಲಿಗೂ ತೆರಳದೆ, ಮನೆಗೂ ಹಿಂತಿರುಗದೇ ನಾಪತ್ತೆಯಾಗಿದ್ದಳು. ಪತ್ನಿ ಕಾಣೆಯಾದ ಬಗ್ಗೆ ಆಕೆಯ ಪತಿ ಸಂತೋಷ ಶೆಟ್ಟಿ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ತನ್ನ ಮಗಳು ಅನ್ಯ ಯುವಕನೊಬ್ಬನೊಂದಿಗೆ ನಾಪತ್ತೆಯಾದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಬಗ್ಗೆ ತಿಳಿದ ಆಕೆಯ ತಾಯಿ ಪಾರ್ವತಿ ಮನನೊಂದು ಭಾನುವಾರ ಸಂಜೆ 6 ಗಂಟೆಯ ಸುಮಾರಿಗೆ ಮನೆಯ ಸನಿಹದಲ್ಲಿರುವ ಗಂಟಿಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Call us

Call us

ಜ. 26ರಂದು ನಾಪತ್ತೆಯಾದ ಮಹಿಳೆ ವಿದ್ಯಾಶ್ರೀಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬೈಂದೂರು ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ನೇತೃತ್ವ ಪೋಲೀಸರ ತಂಡ ಕಾರ್ಯಾಚರಣೆ ನಡೆಸಿ ಅವಳು ತನ್ನ ಪ್ರಿಯಕರ ರವಿ ಮಂಜು ಶೆಟ್ಟಿಯೊಂದಿಗೆ ಬೆಂಗಳೂರಿನಲ್ಲಿರುವುದನ್ನು ಪತ್ತೆಹಚ್ಚಿದ್ದಾರೆ. ಆ ಬಳಿಕ ಬೈಂದೂರು ಠಾಣೆಗೆ ಕರೆತಂದು ಆಕೆಯ ಪತಿ ಹಾಗೂ ಅವರ ಸಂಬಂಧಿಕರ ಸಮ್ಮುಖದಲ್ಲಿ ವಿಚಾರಣೆ ನಡೆಸಿದ್ದು, ವಿದ್ಯಾಶ್ರೀ ತನ್ನ ಪತಿಗೆ ವಿಚ್ಛೇಧನ ನೀಡಿ ಪ್ರಿಯಕರನೊಂದಿಗೆ ತೆರಳುವುದಾಗಿ ಒಪ್ಪಿಗೆ ಸೂಚಿಸಿದ್ದಾಳೆ ಎನ್ನಲಾಗಿದೆ.

ಸಂಬಂಧಿಸಿದ್ದು:  ವಿವಾಹಿತ ಮಹಿಳೆ ನಾಪತ್ತೆ –http://kundapraa.com/?p=10799 .

newsCrime-Story2

Leave a Reply

Your email address will not be published. Required fields are marked *

fourteen − twelve =