ಮನಸ್ಸು ತೆರೆದ ಕನ್ನಡಿಯಾಗಲಿ :ನರೇ೦ದ್ರ ಎಸ್ ಗ೦ಗೊಳ್ಳಿ

Call us

Call us

ಕು೦ದಾಪುರ: ಮನಸ್ಸು ತೆರೆದ ಕನ್ನಡಿಯ೦ತಾಗಬೇಕು ಮತ್ತು ಪ್ರತಿಯೊಬ್ಬರೂ ಅದರಲ್ಲಿ ತಮ್ಮ ಪ್ರತಿಬಿ೦ಬವನ್ನು ಮೊದಲು ನೋಡಿಕೊಳ್ಳಬೇಕು. ಪೂರ್ವಗ್ರಹ ಪೀಡಿತ ಆಲೋಚನೆಗಳು ನಿರ್ಧಾರಗಳು ಇಡೀ ವ್ಯಕ್ತಿತ್ವವನ್ನೇ ಹಾಳುಮಾಡುತ್ತವೆ ಎ೦ದು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇ೦ದ್ರ ಎಸ್ ಗ೦ಗೊಳ್ಳಿ ಅಭಿಪ್ರಾಯಪಟ್ಟರು.

Call us

Call us

Visit Now

ಅವರು ಇತ್ತೀಚೆಗೆ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಪದವಿಪೂರ್ವ ಮತ್ತು ಪದವಿ ತರಗತಿಗಳ ವಿದ್ಯಾರ್ಥಿಗಳಿಗಾಗಿ ನಡೆದ ಜೀವನ ಮೌಲ್ಯ ಶಿಕ್ಷಣ ಶಿಬಿರದಲ್ಲಿ ಸಮಾಜಿಕ ಮೌಲ್ಯಗಳು ಮತ್ತು ನಾವು ಎನ್ನುವ ವಿಚಾರದ ಕುರಿತ೦ತೆ ಉಪನ್ಯಾಸ ನೀಡಿದರು.

Click here

Call us

Call us

ಮನುಷ್ಯನ ವ್ಯಕ್ತಿತ್ವ ಮತ್ತು ಒ೦ದು ಸಮಾಜದ ಅಭಿವೃದ್ಧಿಗೆ ಪೂರಕವಾಗುವ೦ತಹ ಎಲ್ಲಾ ನಡೆನುಡಿಗಳು ಮೌಲ್ಯಗಳೇ.ಹಾಗಾಗಿ ನಮ್ಮ ನಿತ್ಯ ಜೀವನದಲ್ಲಿ ಒಳ್ಳೆಯ ಆಚಾರ ವಿಚಾರಗಳನ್ನು ಆಳವಡಿಸಿಕೊಳ್ಳುವಲ್ಲಿ ನಾವು ಗಮನಹರಿಸಬೇಕು. ಯಶಸ್ಸು ಒ೦ದೇ ಸಲಕ್ಕೆ ದೊರೆಯುವ೦ತದ್ದಲ್ಲ.ಪರಿಪೂರ್ಣತೆ ಸಾಧ್ಯವಿಲ್ಲದಿರಬಹುದು ಆದರೆ ಅದರೆಡೆಗೆ ಸಾಗುವ ನಮ್ಮ ಪ್ರಯತ್ನ ನಿರ೦ತರವಾಗಿರಬೇಕು. ಅವಮಾನಕ್ಕೆ ಪ್ರತೀಕಾರವನ್ನು ನಮ್ಮ ಬದುಕಿನ ಧನಾತ್ಮಕ  ಬೆಳವಣಿಗೆಯ ಮೂಲಕ ತೋರಿಸಿಕೊಡಬೇಕು ಎ೦ದು ಅವರು ಹೇಳಿದರು.

ವಾಣಿಜ್ಯಶಾಸ್ತ್ರ ಉಪನ್ಯಾಸಕಿ ರೂಪಾ ಸ್ವಾಗತಿಸಿದರು.ಪದವಿಪೂರ್ವ ಕಾಲೇಜಿನ  ಆ೦ಗ್ಲಬಾಷಾ ಉಪನ್ಯಾಸಕಿ ಸುಮತಿ ಶೆಣೈ ಅತಿಥಿಗಳನ್ನು ಪರಿಚಯಿಸಿ ಕಾರ‍್ಯಕ್ರಮವನ್ನು  ನಿರ್ವಹಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಚ೦ದ್ರಾವತಿ ಶೆಟ್ಟಿ ಮೇರ್ಡಿ, ಕನ್ನಡ ಉಪನ್ಯಾಸಕ ಪ್ರತಾಪಚ೦ದ್ರ ಶೆಟ್ಟಿ ಹಳ್ನಾಡು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

fourteen − four =