ಮರಳು ದಿಬ್ಬ ತೆರವು: ಅರ್ಹ ಪರವಾನಿಗೆದಾರರಿಂದ ಅರ್ಜಿ ಆಹ್ವಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ ಪ್ರದೇಶದ (CRZ) ಪಾಪನಾಶಿನಿ ನದಿ ಪಾತ್ರದ 01, ಸ್ವರ್ಣಾ ನದಿ ಪಾತ್ರದ 06, ಸೀತಾ ನದಿ ಪಾತ್ರದ 03 ಮರಳು ದಿಬ್ಬಗಳಲ್ಲಿ ಒಟ್ಟು 7,13,090 ಮೆ.ಟನ್ ಮರಳನ್ನು ತೆರವುಗೊಳಿಸಲು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದಿಂದ (KSCZMA) ಕರಾವಳಿ ನಿಯಂತ್ರಣ ವಲಯ ನಿರಾಕ್ಷೇಪಣಾ ಪತ್ರ (CRZ Clearence) ದೊರೆತಿರುತ್ತದೆ.

Click Here

Call us

Call us

ಈ ಸಂಬಂಧ ಮಾ. 16 ರ ಸೋಮವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ 07 ಸದಸ್ಯರ ಸಮಿತಿ ಸಭೆಯಲ್ಲಿ ಸಾಂಪ್ರದಾಯಿಕ ಮರಳು ಪರವಾನಿಗೆದಾರರಿಗೆ ಸದರಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ತಾತ್ಕಾಲಿಕ ಪರವಾನಿಗೆಯನ್ನು ನೀಡಲು ತೀರ್ಮಾನಿಸಲಾಗಿರುತ್ತದೆ.

Click here

Click Here

Call us

Visit Now

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಕಟಣಾ ಫಲಕದಲ್ಲಿ ಮರಳು ದಿಬ್ಬಗಳ ವಿವರಗಳನ್ನು ಈಗಾಗಲೇ ಪ್ರಕಟಿಸಿದ್ದು,2019 ರ ಸೆಪ್ಟಂಬರ್ 17 ಮತ್ತು 30 ರಂದು ನಡೆದ ಜಿಲ್ಲಾ 07 ಸದಸ್ಯರ ಸಮಿತಿ ಸಭೆಗಳಲ್ಲಿ ನಿರ್ಣಯಿಸಿದಂತೆ, ಅರ್ಹ ಸಾಂಪ್ರದಾಯಿಕ ಮರಳು ಪರವಾನಿಗೆದಾರರು ಮರಳು ದಿಬ್ಬಗಳಿಗೆ ಸಂಬಂಧಿಸಿದಂತೆ ಪ್ರಥಮ, ದ್ವಿತೀಯ ಆಧ್ಯತೆಗಳಂತೆ ಸ್ಪಷ್ಟವಾಗಿ ನಮೂದಿಸಿ ಮಾರ್ಚ್ 31 ರ ಸಂಜೆ 5 ಗಂಟೆಯೊಳಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಹಿರಿಯ ಭೂ ವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಜತಾದ್ರಿ, ಮಣಿಪಾಲ ಇಲ್ಲಿಗೆ ಸಲ್ಲಿಸಬೇಕು. ನಂತರದಲ್ಲಿ ಸ್ವೀಕೃತವಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ದೂರವಾಣಿ ಸಂಖ್ಯೆ: 0820-2572333 ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

3 + eleven =