ಮರವಂತೆಯಲ್ಲಿ ಬಾಲ ಕಲಾವಿದರ ಯಕ್ಷ ಪ್ರತಿಭೆ ಅನಾವರಣ

Click Here

Call us

Call us

ಕುಂದಾಪ್ರ ಡಾಟ್ ಕಾಂ ಲೇಖನ.
ಮೊರೆತು ನಿಲುವೆ ಏಕ ಮಾವ ಅಳಿಯನಲ್ಲವೇ.. ಉರಿವುದೊಂದೇ ದೀಪವಾದರೂ.. ಎರಡಾಗುತ..ಮೂರಾಗುತ.. ಕರೆಸಿ ಕೊಲುವೆ ಏಕೆ ಮಾವ ಅಳಿಯನಲ್ಲವೇ ಎಂಬ ಪದ್ಯಗಳಿಗೆ ಹಾಲುಗಲ್ಲದ ಮಕ್ಕಳ ನೃತ್ಯಾಭಿನಯಕ್ಕೆ ತಲೆ ದೂಗದವರಿಲ್ಲ.. ಕಂಡೆನೊಂದು ಕನಸಿನ ಪದ್ಯಕ್ಕೆ ಕಂಸ ವೇಷಧಾರಿ ಅಭಿನಯ ಅಲ್ಲಲ್ಲಿ ಚಿಟ್ಟಾಣಿ ನೆನಪು ಮೂಡಿಸಿದ್ದು ಸುಳ್ಳಲ್ಲ..

Call us

Call us

Click Here

Visit Now

ಧೂರ್ವಾಸ ಮುನಿಯ ಶಾಪಕ್ಕೆ ಒಳಗಾಗುವ ಗಂಧರ್ವನ ಪಾತ್ರ ನಿರ್ವಹಸಿದ ಪುಣಾಣಿ ಬಾಲಕಿಯ ನೃತ್ಯ ಕೌಶಲ್ಯ ತರಬೇತುದಾರರ ಪರಿಶ್ರಮಕ್ಕೆ ಸಿಕ್ಕ ಫಲ. ರಾಜಾರಜಕ, ಆಸ್ತಿ ಪಾಸ್ತಿ ಹೀಗೆ ಪಾತ್ರಗಳಲ್ಲಿ ಕಾಣಿಸಿಕೊಂಡವರೆಲ್ಲಾ.. ನಾಲ್ಕನೇ ತರಗತಿ ಒಳಗಿನ ಮಕ್ಕಳು..! ಗಂಡು ಮತ್ತು ಹೆಣ್ಣು ಮಕ್ಕಳು ಒಟ್ಟಾಗಿ ರಂಗದಲ್ಲಿ ಮೂರು ಗಂಟೆ ಕಾಲ ವೀಕ್ಷಕರ ಸೆರೆ ಹಿಡಿದು ಕೂರಿಸಿದ ಮಕ್ಕಳ ಯಕ್ಷಗಾನ ಕಸರತ್ತು.. ಯಾಕ್ಷಗಾನಕ್ಕೆ ಉಳಿಗಾಲವಿಲ್ಲ ಎಂದು ಬೊಬ್ಬೆಯಿಡುವವರಿಗೆ ಉತ್ತರವೂ ಹೌದು. ೩೦ಕ್ಕೂ ಮಿಕ್ಕ ಮಕ್ಕಳ ಸಿದ್ದ ಪಡಿಸಿ, ಮಕ್ಕಳ ರಂಗದಲ್ಲಿ ತರುವ ಕೆಲಸ ಸುಲಭ ಸಾಧ್ಯವೂ ಅಲ್ಲ. ಎಲ್ಲವೂ ಸಾಧ್ಯವಾಗಿದ್ದು ಮರವಂತೆ ಶ್ರೀ ದುರ್ಗಾಪರಮೇಶ್ವರಿ ಜಾತ್ರೆ ಸಂದರ್ಭ. ಮಕ್ಕಳ ಯಕ್ಷಾಗನ ಪ್ರತಿಭೆ ಕಂಡು ಬೋಳಂಬಳ್ಳಿ ಯಕ್ಷಪ್ರೇಮಿ ನಮ್ಮೂರಿಗೆ ಬಂದು ಯಕ್ಷಗಾನ ಪ್ರದರ್ಶನ ನೀಡವಂತೆ ಆಹ್ವಾನಿಸಿದ್ದು ಮಕ್ಕಳ ಪ್ರಯತ್ನಕ್ಕೆ ಸಿಕ್ಕ ಪ್ರಶಸ್ತಿ.

Click here

Click Here

Call us

Call us

ಹಾಗಂತ ಯಕ್ಷಗಾನ ಪ್ರದರ್ಶನದಲ್ಲಿ ತಪ್ಪೇ ಇಲ್ಲಾ ಅಂತ ಅರ್ಥವಲ್ಲ. ತಪ್ಪಾಗಿದ್ದರೂ ಮಕ್ಕಳು ಎನ್ನುವ ನಿಟ್ಟಿನಲ್ಲಿ ಸ್ವೀಕಾರಾರ್ಹ. ಮರವಂತೆ ಸಾಧನಾ ಸಭಾಂಗಣದಲ್ಲಿ ಕಳೆದ ಆರೇಳು ತಿಂಗಳಿಂದ ಯಕ್ಷಗಾನ ತರಬೇತಿ ನಡಸಲಾಗುತ್ತಿತ್ತು. ಮೊದಲು ಮಕ್ಕಳಿಂದ ಯಕ್ಷಗಾನ ಪ್ರದರ್ಶನ ನೀಡುವ ಯಾವ ಉದ್ದೇಶವೂ ಇರಲಿಲ್ಲ. ತರಬೇತಿಗೆ ಸೇರಿದ ಮಕ್ಕಳಿಗೆ ಮುಂದೆ ನಾವು ರಂಗಸ್ಥಳದಲ್ಲಿ ಬರುತ್ತೇವೆ ಎನ್ನುವ ಕಲ್ಪನೆಯೂ ಇರಲಿಲ್ಲ. ಸಾಲಿಗ್ರಾಮ ಮಕ್ಕಳ ಮೇಳದ ಪ್ರಭಾವದಿಂದ ಮಕ್ಕಳ ಏಕ ರಂಗಕ್ಕೆ ತರಬಾರದು ಎನ್ನುವ ಯೋಜನೆಯೇ ರಂಗದಲ್ಲಿ ಮಕ್ಕಳು ಕೃಷ್ಣ ಬಲರಾಮರಾದರು, ಕಂಸನಾದ, ಆಸ್ತಿ ಮಾಸ್ತಿಯಾದರು. ರಾಜ ರಜಕನ ಮೂಲಕ ಹಾಸ್ಯದ ಹೊನಲು ಹರಿಸಿದರು.

ಮಕ್ಕಳ ರಂಗದಲ್ಲಿ ತರುವ ಹಿನ್ನೆಲೆಯಲ್ಲಿ ಹಿಂದೆ ನಿಂತವರು ಹಲವಾರು ಹಾಗೂ ಆಸರೆ ಟ್ರಸ್ಟ್. ಮರವಂತೆ ಪರಿಸರದಲ್ಲಿ ಆನಾರೋಗ್ಯ ಪೀಡಿತರಿಗೆ ಆರ್ಥಿಕವಾಗಿ ಹಿಂದುಳದವರಿಗೆ ಆಸರೆ ಆಗುತ್ತಿದ್ದ ಆಸರೆ ಟ್ರಸ್ಟ್, ಯಕ್ಷಗಾನ ಪ್ರೇಮಿ ಲಂಡನ್‌ನಲ್ಲಿದ್ದರೂ ಯಕ್ಷಗಾನಕ್ಕೆ ಮಿಡಿಯುವ ಯೋಗೀಂದ್ರ ಮರವಂತೆ, ಕರುಣಾಕರ ಹಾಗೂ ಸಮಾಜದ ಇನ್ನಿತರ ಯಕ್ಷಗಾನ ಅಭಿಮಾನಿಗಳು ಬೆನ್ನಿಗೆ ನಿಂತರು. ಮಕ್ಕಳಿಂದ ನಯಾಪೈಸೆ ಪಡೆಯದೆ, ಉಚಿತ ಯಕ್ಷಗಾನದ ಹೆಜ್ಜೆ ಕಲಿಸಿ, ಅರ್ಥಹೇಳಿಕೊಟ್ಟು ತರಬೇತಿ ನೀಡಿದ ದೇವರಾಜ್ ದಾಸ್ ದೊಡ್ಡ ಕೊಡುಗೆ ನೀಡಿದ್ದಾರೆ. ಒಟ್ಟಾರೆ ಮರವಂತೆಯಲ್ಲಿ ಮಕ್ಕಳು ರಂಗದಲ್ಲಿ ಥಕಥೈ ಎನ್ನುವ ಮೂಲಕ ಭರವಸೆ ಮೂಡಿಸಿದ್ದು, ಇದೇ ಮಕ್ಕಳ ಮುಂದಿಟ್ಟುಕೊಡು ಸಮರ್ಥ ತಂಡ ಕಟ್ಟುವ ಬಗ್ಗೆ ಕೂಡಾ ಚಿಂತನೆ ಮಾಡುವಷ್ಟು ಪ್ರಬುದ್ಧವಾಗಿ ಮಕ್ಕಳು ಅಭಿನಯಿಸಿದ್ದಾರೆ.

Leave a Reply

Your email address will not be published. Required fields are marked *

1 × two =