ಮರವಂತೆ: ನನ್ನ ಶಾಲೆಗೀಗ ಅಮೃತ ಮಹೋತ್ಸವದ ಸಂಭ್ರಮ

Click Here

Call us

Call us

ಡಾ. ಶುಭಾ ಮರವಂತೆ. | ಕುಂದಾಪ್ರ ಡಾಟ್ ಕಾಂ ಲೇಖನ
ಒಬ್ಬ ವ್ಯಕ್ತಿ ತನ್ನ ವ್ಯಕ್ತಿ ಬದುಕಿನ ಬೆಳ್ಳಿ ಹಬ್ಬವನ್ನೂ, ಚಿನ್ನದ ಹಬ್ಬವನ್ನೂ ಆಚರಿಸಿಕೊಳ್ಳುತ್ತಾನೆಂದರೆ ಅದು ಒಂದು ಮನೆಯ, ಬಂಧು ಬಳಗದ ಸಡಗರ ಸಂಭ್ರಮ ಮಾತ್ರ. ಒಂದು ದೇವಸ್ಥಾನ ಆಚರಿಸಿಕೊಳ್ಳುತ್ತದೆಂದರೆ ಅದು ಕೇವಲ ಒಂದು ಸಮುದಾಯದ ಸಡಗರ, ಸಂಭ್ರಮವಾಗಬಹುದು. ಆದರೆ ಒಂದು ಶಾಲೆ ತನ್ನ ತನ್ನ ಇತಿಹಾಸವನ್ನು ಮರುನೆನಪಿಸಿಕೊಳ್ಳುತ್ತದೆ ಎಂದರೆ ಅದು ಸಮೂಹದ ಸಂಭ್ರಮ. ಈ ಸಮೂಹದಲ್ಲಿ ಎಲ್ಲಾ ಜಾತಿ, ಧರ್ಮ, ಜನವರ್ಗ ಯಾವುದೆ ಬಗೆಯ ನಿರ್ಬಂಧಗಳಿಲ್ಲದೆ ಒಂದುಗೂಡುವ ಸೌಹಾರ‍್ದಯುತ ವಾತಾವರಣವನ್ನು ಕಾಣಬಹುದು. ಹಾಗಾಗಿಯೇ ಶಾಲೆ ಒಂದು ಒಂದು ಸಮೂಹದ ಆಸ್ತಿ. ಎಲ್ಲರೂ ಇದರ ವಾರಸುದಾರರೆ. ಮರವಂತೆಯ ಶಾಲೆ ತನ್ನ ಎಪ್ಪತ್ತೈದು ವಸಂತಗಳನ್ನು ದಾಟಿ ಎಂಬತ್ತರ ಹೊಸ್ತಿಲಿನಲ್ಲಿರುವಾಗ ಈ ಶಾಲೆಯಲ್ಲಿ ಕಲಿತವರು ಎಲ್ಲಿದ್ದರೂ ಹೇಗಿದ್ದರೂ ತನ್ನ ಶಾಲಾ ಜೀವನವನ್ನು ನೆನಪಿಸಿಕೊಂಡು ಕಲಿಸಿದ ಗುರುಗಳಿಗೆ ನಮ್ಮ ಹೃದಯಾಂತರಾಳದ ನಮನಗಳನ್ನು ಹೇಳಲು ಇದೊಂದು ಸುವರ್ಣಾವಕಾಶ.

Click Here

Call us

Call us

Visit Now

‘ಅನುಭವವು ಸವಿಯಲ್ಲ ಅದರ ನೆನಪೇ ಸವಿಯು’ ಎಂಬುದು ಕಡೆಂಗೋಡ್ಲು ಶಂಕರಭಟ್ಟರ ಕವಿವಾಣಿ. ಇದು ಅಕ್ಷರಶಃ ಸತ್ಯ. ನಮ್ಮ ಬಾಲ್ಯದ ನೆನಪುಗಳಲ್ಲಿ ಶಾಲಾ ಜೀವನದ ನೆನಪುಗಳಿಗೆ ಅಗ್ರ ಸ್ಥಾನ. ನೆನಪುಗಳ ಮಾಲೆಯೊಂದು ಮೆಲ್ಲನೆ ಮನಸ್ಸಿನಲ್ಲಿ ಹಾಯ್ದು ಹೋಗುವ ಈ ಗಳಿಗೆಯಲ್ಲಿ ಆ ದಿನಗಳನ್ನು ನೆನಪಿಸಿಕೊಳ್ಳುವುದು ಒಂದು ಸುಂದರ ಅನುಭವ. ಎಷ್ಟೆಲ್ಲಾ ಕನಸುಗಳು, ಎಂತಹ ಉದಾರತೆ, ಕಣ್ಣ ತುಂಬಿದ ಬಣ್ಣದ ಜಗತ್ತು ಒಂದಾ ಎರಡಾ! ಕುಂದಾಪ್ರ ಡಾಟ್ ಕಾಂ ಅಂಕಣ

Click here

Click Here

Call us

Call us

ನಾನು ಕಲಿತ ಮರವಂತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ ಅಮೃತ ಮಹೋತ್ಸವ ಸಂಭ್ರಮ. ಕಡಲತಡಿಯ ಸೊಬಗಿನ ತಾಣವಾದ ಮರವಂತೆಗೆ ಜಾಗತಿಕ ಮಟ್ಟದ ಮಾನ್ಯತೆ ಇದೆ. ಪ್ರಕೃತಿಯ ರುದ್ರ ರಮಣೀಯ ಈ ಎರಡೂ ಅಭಿವ್ಯಕ್ತಿ ಸಾಧ್ಯತೆಯ ನನ್ನೂರಿನ ನನ್ನ ಶಾಲೆ ನಮ್ಮೆಲ್ಲರ ಮನೋವಿಕಾಸದ ಒಂದು ಭಾಗ. ಕಲೆ, ಕ್ರೀಡೆ, ಸಾಹಿತ್ಯ, ಸಂಸ್ಕೃತಿ ಪ್ರೀತಿಯನ್ನು ನನ್ನೊಡಲೊಳಗೆ ಮೆಲ್ಲನೆ ಹುದುಗಿಸಿದ ನನ್ನ ಗುರು ವೃಂದವನ್ನು ನೆನಪಿಸಿಕೊಳ್ಳುವ ಒಂದು ಸಾರ್ಥಕ ಕ್ಷಣ ಈ ಅಮೃತ ಮಹೋತ್ಸವ. ೧೦೮೧-೮೨ರ ಹೊತ್ತಿಗೆ ಅತ್ಯಂತ ಬಡ ಕುಟುಂಬದ ಸಾಮಾನ್ಯ ವಿದ್ಯಾರ್ಥಿನಿಯಾಗಿ ಶಾಲೆಗೆ ಸೇರಿದ ನಾನು, ನನ್ನಂತಹ ಎಷ್ಟೋ ವಿದ್ಯಾರ್ಥಿಗಳಿಗೆ ಬಾಳಿನ ಬೆಳಕು ತೋರಿದ ಶಾಲೆ ಎಂದರೆ ತಪ್ಪಾಗಲಾರದು. ಅತ್ಯಂತ ಶಿಸ್ತು ಬದ್ಧ ನಡೆನುಡಿಯನ್ನು ತಿದ್ದಿ, ಕಲಿಸಿದ ನನ್ನ ಶಾಲೆ ಎಂದರೆ ನನಗೆ ಚಿಕ್ಕಂದಿನಿಂದಲೂ ಒಂದು ಬಗೆಯ ಆಕರ್ಷಣೆ. ಶ್ರೀಯತರಾದ ಕೊರಗಪ್ಪ ದೇವಾಡಿಗ, ಆನಂದ ಅಡಿಗ, ಹಸನ್ ಬಪ್ಪ, ಶಾಂತಾರಾಮ, ಸುಬ್ರಾಯ ಹೆಬ್ಬಾರ್, ವೆಂಕ ಹಾಂಡ, ರಾಮ ಪೂಜಾರಿ, ಜುಡಿತಾ ಟೀಚರ್, ಮಾಧವ ಹೆಬ್ಬಾರ, ರಮೇಶ ಪೈ ಹೀಗೆ ನಮಗೆ ಕಲಿಸುತ್ತಿದ್ದ ಶಿಕ್ಷಕರು. ಆಳವಾದ ಜೀವನ ಪ್ರೀತಿ, ಕರುಣೆಯ ಕಡಲನ್ನೆ ಮೈವೆತ್ತಂತೆ ನನಗೆ ಕಂಡಿದ್ದರು. ಕಡುಬಡತನದಲ್ಲಿ ಹರಕು ಬಟ್ಟೆ ತೊಟ್ಟ ಹಳ್ಳಿಯ ಮಕ್ಕಳನ್ನು ತಮ್ಮ ಮಕ್ಕಳಂತೆ ಪ್ರೀತಿಸಿದ ಇಂತಹ ಗುರುಗಳ ನಡೆ ಎಂದಿಗೂ ನನಗೆ ಆದರ್ಶಪ್ರಾಯ. ಶತಮಾನಕ್ಕೆ ಈ ನೆನಪುಗಳ ಮಾಲಿಕೆ ಹೊತ್ತು ಸಾಗುವ ಈ ಶುಭ ಗಳಿಗೆಯಲ್ಲಿ ನನ್ನೂರ ಶಾಲೆಗೆ ನನ್ನ ನಮನ.

Leave a Reply

Your email address will not be published. Required fields are marked *

twenty − seventeen =