ಮರವಂತೆ : ನಿವೇಶನ ಹಕ್ಕುಪತ್ರಕ್ಕಾಗಿ ಸರಕಾರಿ ಜಾಗ ಗುರುತಿಸಲು ಒತ್ತಾಯಿಸಿ ಸಮಾವೇಶ

Call us

Call us

Click here

Click Here

Call us

Call us

Visit Now

ಮರವಂತೆ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಲಾಡ್ಯರು, ಶ್ರೀಮಂತರು, ರಾಜಕೀಯ ಧುರೀಣ ಸ್ಥಾಪಿತ ಹಿತಾಶಕ್ತಿಗಳು ಸರಕಾರಿ ಜಾಗವನ್ನು ಅನಧೀಕೃತವಾಗಿ ಅತಿಕ್ರಮಿಸಿ, ಅಕ್ರಮವಾಗಿ ಸ್ಥಳ ಸ್ವಾಧೀನತೆ ಹೊಂದಿರುವುದನ್ನು ಈ ಕೂಡಲೇ ತೆರವುಗೊಳಿಸಿ-ಬಡತನ ರಹಿತರಿಗೆ ಮಂಜೂರು ಮಾಡಲು ಕಂದಾಯ ಇಲಾಖೆ ಕ್ರಮವಹಿಸಬೇಕು ಎಂದು ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ಅಧ್ಯಕ್ಷ ಮನ್ಸೂರ್ ಇಬ್ರಾಹಿಂ ಸರಕಾರವನ್ನು ಒತ್ತಾಯಿಸಿದರು.

Call us

Call us

ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಮತ್ತು ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಆಶ್ರಯದಲ್ಲಿ ೫ ನವಂಬರ್ ೨೦೧೫ ರಂದು ಮರವಂತೆ ಸಾಧನಾ ಸಭಾಭವನದಲ್ಲಿ ಜರಗಿದ ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಐಟಿಯು ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಟ ಶೆಟ್ಟಿ, ನಿವೇಶನ ರಹಿತರ ಭೂಮಿ ಹಕ್ಕಿನ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿ ಮಾತನಾಡಿದರು. ಕೃಷಿ ಕೂಲಿಕಾರರ ಸಂಘದ ಮುಖಂಡರಾದ ರಾಜೀವ ಪಡುಕೋಣೆ, ಸುರೇಶ ಕಲ್ಲಾಗರ, ವೆಂಕಟೇಶ ಕೋಣಿ, ಶೇಖರ ಮರವಂತೆ ಗ್ರೇಶನ್‌ಕ್ರಾಸ್ತ, ಸದಾನಂದ ಪೂಜಾರಿ, ಬೇಬಿ ಗೌರಿಕೆರೆ ಮನೆ, ಶ್ಯಾಮಲ, ಸುಮತಿ, ಲಲಿತ ನಾಗರತ್ನ ನಾಡ, ಪದ್ಮಾವತಿ ಶೆಟ್ಟಿ, ಕುಶಲ, ಶೀಲಾವತಿ ಉಪಸ್ಥಿತರಿದ್ದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮರವಂತೆ ಗ್ರಾಮ ಸಮಿತಿ ಹಾಗೂ ನಿವೇಶನ ರಹಿತರ ಹೋರಾಟ ಸಮಿತಿ ಕಾರ್ಯದರ್ಶಿ ವೆಂಕಟೇಶ್ ತೋಳಾರ್ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಸಭೆಗೆ ವಂದಿಸಿದರು.

Leave a Reply

Your email address will not be published. Required fields are marked *

2 × 3 =