ಮರವಂತೆ: ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆಯ ಗುರುನಾರಾಯಣ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಧನಾ ಮಂಟಪದಲ್ಲಿ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಕೆ. ಗೋಪಾಲ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಮುದಾಯ ಸಂಘಟಿತವಾದರೆ ಅದು ಎದುರಿಸುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಶಕ್ತಿ ದೊರೆಯುತ್ತದೆ. ಸಂಘಟನೆ ಎಲ್ಲಕ್ಕಿಂತ ಹೆಚ್ಚಾಗಿ ಯುವಜನರ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. ಸಂಘಟನೆಯನ್ನು ಇನ್ನೊಂದು ಸಮುದಾಯದೊಂದಿಗೆ ಸ್ಪರ್ಧೆಗೆ ಬಳಿಸಿಕೊಳ್ಳದೆ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಬೇಕು ಎಂದರು.

Call us

Call us

Call us

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ. ಅಣ್ಣಪ್ಪ ಬಿಲ್ಲವ ಸ್ವಾಗತಿಸಿದರು. ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ನಾರಾಯಣಗುರುಗಳು ಸಮಾನತೆಯ ಸಮಾಜ ನಿರ್ಮಿಸಲು ಶ್ರಮಿಸಿದರು. ಇದನ್ನು ಬಿಲ್ಲವ ಸಂಘಟನೆ ಅರ್ಥಮಾಡಿಕೊಳ್ಳಬೇಕು. ತಮ್ಮ ಸಮುದಾಯದ ಸದಸ್ಯರು ಸ್ವಾವಲಂಬಿಗಳಾಗಿ, ಗೌರವಯುತವಾಗಿ ಬದುಕಲು ಅಗತ್ಯ ಅವಕಾಶ ಸೃಷ್ಟಿಸಬೇಕು ಎಂದರು.

Call us

Call us

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯಿತಿ ಸದಸ್ಯ ಜಗದೀಶ ಪೂಜಾರಿ, ಗ್ರಾಪಂ ಉಪಾಧ್ಯಕ್ಷ ಗಣೇಶ ಪೂಜಾರಿ, ಸದಸ್ಯರಾದ ಆನಂದ ಪೂಜಾರಿ, ಸುಶೀಲಾ ಪೂಜಾರಿ, ಸಂಘದ ಗೌರವಾಧ್ಯಕ್ಷ ಪುಟ್ಟ ಬಿಲ್ಲವ, ಉಪಾಧ್ಯಕ್ಷರಾದ ಅಣ್ಣಯ್ಯ ಪೂಜಾರಿ, ಸಂಜೀವ ಪೂಜಾರಿ, ಜತೆ ಕಾರ್ಯದರ್ಶಿಗಳಾದ ಶ್ಯಾಮಲಾ, ಸುಧಾ ಇದ್ದರು. ಕೋಶಾಧಿಕಾರಿ ಸೋಮಯ್ಯ ಬಿಲ್ಲವ ವಂದಿಸಿದರು. ಕಾರ್ಯದರ್ಶಿ ಎಂ. ಶಂಕರ ಬಿಲ್ಲವ ನಿರೂಪಿಸಿದರು. ಉಭಯ ಶಾಸಕರನ್ನು, ಯೋಗಪಟು ಕುಶ ಪೂಜಾರಿ, ದಾನಿಗಳಾದ ಸತೀಶ ಪೂಜಾರಿ, ಶ್ರೀಧರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ಮಕ್ಕಳಿಂದ ಯಕ್ಷಗಾನ, ಭರತ ನಾಟ್ಯ ಪ್ರದರ್ಶನ ನಡೆದುವು.

 

Leave a Reply

Your email address will not be published. Required fields are marked *

ten − two =