ಮರವಂತೆ: ರಂಗೋಲಿ ಕಲಾ ಪರಿಷತ್ತು ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗೋಲಿ ಕಲೆ ಆದಿ ಮಾನವರ ಕಾಲದಲ್ಲಿ ಆರಂಭವಾಗಿ ಈವರೆಗೆ ವಿಕಸನ ಮತ್ತು ಪರಿಷ್ಕರಣೆಗೊಳ್ಳುತ್ತ ಬಂದಿದೆ. ಅದು ಮನುಷ್ಯನ ಭಾಷೆ ಮತ್ತು ಮಾತಿನ ಹುಟ್ಟಿಗಿಂತ ಹಿಂದಿನ ಅಭಿವ್ಯಕ್ತಿ ಮಾಧ್ಯಮವಾಗಿತ್ತು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ವಿಭಾಗ ಮುಖ್ಯಸ್ಥ ಡಾ. ಚೆಲುವರಾಜು ಹೇಳಿದರು.

Click Here

Call us

Call us

ಮರವಂತೆಯಲ್ಲಿ ಅವರು ಕನ್ನಡ ಜಾನಪದ ಪರಿಷತ್ತಿನ ಅಂಗ ಸಂಸ್ಥೆಯಾಗಿ ಆರಂಭಗೊಂಡ ರಂಗೋಲಿ ಕಲಾ ಪರಿಷತ್ತು ಉದ್ಘಾಟಿಸಿ ಅವರು ಮಾತನಾಡಿದರು. ‘ರಂಗೋಲಿ ಮೂಲತಃ ರೇಖೆಗಳಿಂದ ಆರಂಭವಾಗಿ, ಆಕೃತಿಗಳಲ್ಲಿ ಮೈದಳೆಯುತ್ತ ಬೆಳೆಯಿತು ನಾವು ಈಗ ಬಳಸುವ ಹಲವು ಚಿಹ್ನೆಗಳ ಮೂಲ ರಂಗೋಲಿ. ರೇಖಾ ಸಂಸ್ಕೃತಿ ರಾಮಾಯಣ, ಮಹಾಭಾರತ ಕಾಲದಲ್ಲೂಇತ್ತುಎನ್ನುವುದಕ್ಕೆನಿದರ್ಶನಗಳಿವೆ. ಇಂದು ಬಳಕೆಯಾಗುತ್ತಿರುವ ನಾಗಮಂಡಲದಂತಹ ಧಾರ್ಮಿಕ ಆಚರಣೆಗಳಲ್ಲಿ ರಂಗೋಲಿ ಸಂಸ್ಕೃತಿ ಇದೆ. ಈ ಕಲೆಯನ್ನು ಅಧ್ಯಯನ ಮಾಡಿ ಡಾಕ್ಟರೇಟ್ ಗಳಿಸಿ, ರಾಜ್ಯ ಜಾನಪದ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿ ಆಗಿರುವ ಡಾ. ಭಾರತಿ ಮರವಂತೆ ಅವರ ನೇತ್ರತ್ವದಲ್ಲಿ ಆರಂಭವಾದ ರಂಗೋಲಿ ಕಲಾ ಪರಿಷತ್ತು ಅದಕ್ಕೆ ವಿಶ್ವ ಮಾನ್ಯತೆ ತಂದು ಕೊಡಲಿ’ ಎಂದು ಹೇಳಿದರು.

Click here

Click Here

Call us

Visit Now

ಅಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಎಸ್. ಬಾಲಾಜಿ, ‘ರಂಗೋಲಿ ಕಲೆಯ ಕುರಿತು ಇನ್ನಷ್ಟು ಅಧ್ಯಯನ ನಡೆಯಬೇಕು’ ಎಂದರು.

ಡಾ. ಭಾರತಿ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಗಂಗೊಳ್ಳಿ ವಂದಿಸಿದರು. ರಾಜೇಶ ಆಚಾರ್ಯ ಮರವಂತೆ ನಿರೂಪಿಸಿದರು. ನಿವೃತ್ತ ಪ್ರಾಂಶುಪಾಲ ಡಾ. ಕನರಾಡಿ ವಾದಿರಾಜ ಭಟ್, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ, ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಕೆ. ಸಿ., ಕುಂದಾಪುರ ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಉದಯಕುಮಾರ, ಮರವಂತೆ ಮುಖ್ಯಶಿಕ್ಷಕರಾದ ಸತ್ಯನಾ ಕೊಡೇರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ಮಡಿವಾಳ, ಆಸರೆ ಟ್ರಸ್ಟ್‌ನ ಟ್ರಸ್ಟಿ ಸಂತೋಷ ಮೊಗವೀರ ಇದ್ದರು.

Leave a Reply

Your email address will not be published. Required fields are marked *

fifteen + fourteen =