ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆಯ ಸೇವಾ ಸಾಂಸ್ಕೃತಿಕ ವೇದಿಕೆ ಸಾಧನಾ ಮತ್ತು ಸಾಧನಾ ಜನಾರ್ದನ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಭಾನುವಾರ ಸಾಧನಾ ಸಮುದಾಯ ಭವನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ನಡೆಯಿತು.
ಸಾಧನಾ ಅಧ್ಯಕ್ಷ ಚಂದ್ರ ಬಿಲ್ಲವ ರಾಷ್ಟ್ರಧ್ವಜ ಅರಳಿಸಿ, ಬಳಿಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದೇಶ ವಿದೇಶಗಳಲ್ಲಿ ನಡೆದ ಯೋಗ ಸ್ಪರ್ಧೆಗಳಲ್ಲಿ ಉತ್ಕೃಷ್ಟತೆ ಮೆರೆದು ಚಿನ್ನ ಬೆಳ್ಳಿ ಗೆದ್ದುಕೊಂಡಿರುವುದಲ್ಲದೆ ಈಚೆಗೆ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆಯಾದ ಮತ್ತು ಫ್ರೈಡ್ ಆಫ್ ಇಂಡಿಯ ಪ್ರಶಸ್ತಿ ಪಡೆದ ಬಾಲಕಿ ಧನ್ವಿ ಮರವಂತೆ ಅವರನ್ನು ಸನ್ಮಾನಿಸಲಾಯಿತು. ಜತೀಂದ್ರ ಮರವಂತೆ ಧನ್ವಿಯನ್ನು ಪರಿಚಯಿಸಿದರು.

ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಮರವಂತೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅನುರಾಗ್ ಆರ್. ಕೆ, ಅಂಕಿತಾ ಪೂಜಾರಿ, ಪ್ರಥ್ವಿ ಪೂಜಾರಿ ಅವರನ್ನು ಪುರಸ್ಕರಿಸಲಾಯಿತು. ಸಾಧನಾ ಸ್ಥಾಪಕಾಧ್ಯಕ್ಷ ಎಸ್. ಜನಾರ್ದನ ಮರವಂತೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕೋಶಾಧಿಕಾರಿ ಕೃಷ್ಣಯ್ಯ ಆಚಾರ್ಯ, ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಇದ್ದರು. ಸೀತಾರಾಮ ಮಡಿವಾಳ್ ನಿರೂಪಿಸಿದರು. ಅಣ್ಣಪ್ಪ ಬಿಲ್ಲವ ಸ್ವಾಗತಿಸಿದರು. ಕಾರ್ಯದರ್ಶಿ ದೇವಿದಾಸ್ ಶ್ಯಾನುಭಾಗ್ ವಂದಿಸಿದರು.