ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾಲ್ಕು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ ಸಂಘವು ಶಾಲೆಯಲ್ಲಿ ಕುಸಿಯುತ್ತಿರುವ ವಿದ್ಯಾರ್ಥಿ ಸಂಖ್ಯೆಯನ್ನು ಒಂದು ಸವಾಲಾಗಿ ಸ್ವೀಕರಿಸಿತು. ವಿದ್ಯಾಭಿಮಾನಿಗಳು ನೀಡಿದ ದೇಣಿಗೆ, ಸದಸ್ಯರು ಮಾಡಿದ ಸಾಲ ಬಳಸಿಕೊಂಡು ಒಟ್ಟು ರೂ ೧೫ ಲಕ್ಷ ವೆಚ್ಚದಲ್ಲಿ ಬಸ್ ಖರೀದಿಸಿ ಶಾಲೆಗೆ ಹಸ್ತಾಂತರಿಸಿತು. ಪ್ರಾಥಮಿಕ ಪೂರ್ವ ತರಗತಿಗಳನ್ನು ಆರಂಭಿಸಿ, ನಡೆಸಿತು. ಅದರ ಫಲವಾಗಿ ಶಾಲೆ ನಿರೀಕ್ಷಿತ ಪ್ರಗತಿ ಸಾಧಿಸಿತು ಎಂದು ಸಂಘದ ಅಧ್ಯಕ್ಷ ದಯಾನಂದ ಬಳೆಗಾರ್ ಹೇಳಿದರು.
ಅವರು ಸಾಧನಾ ಸಮುದಾಯ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಮೂಲಗಳಿಂದ ಧನಸಂಗ್ರಹ ಮಾಡಿ ಬಸ್‌ಗೆ ಮಾಡಿದ ಋಣದಿಂದ ಸಂಘ ಈಗ ಮುಕ್ತವಾಗಿದೆ. ಮುಂದಿನ ದಿನಗಳಲ್ಲೂ ಶಾಲೆಯ ಅಭಿವೃದ್ಧಿಗೆ ನೆರವಾಗುವ ಮೂಲಕ ಕಲಿತ ಶಾಲೆಯ ಋಣ ತೀರಿಸಲು ಸಂಘ ಬದ್ಧವಾಗಿದೆ ಎಂದರು.
ಅನಿತಾ ಆರ್. ಕೆ, ಪ್ರಾರ್ಥನೆ ಹಾಡಿದರು. ಅಣ್ಣಪ್ಪ ಖಾರ್ವಿ ಸ್ವಾಗತಿಸಿದರು. ದೇವಿದಾಸ ಶ್ಯಾನುಭಾಗ್ ಮಹಾಸಭೆಯ ತಿಳುವಳಿಕೆ ಪತ್ರ ಓದಿದರು. ಕಾರ್ಯದರ್ಶಿ ರವಿ ಮಡಿವಾಳ್ ವರದಿ ಮತ್ತು ಆಯವ್ಯಯ ಮಂಡಿಸಿದರು. ರಾಜೇಶ್ ಆಚಾರ್ಯ ನಿರೂಪಿಸಿ, ವಂದಿಸಿದರು. ಸಂಘದ ಪೋಷಕ ಆನಂದ ಪೂಜಾರಿ ಹೊಸಮನೆ ಇದ್ದರು.
ರವಿ ಮಡಿವಾಳ್ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಳಿದ ಪದಾಧಿಕಾರಿಗಳು : ಗೌರವ ಅಧ್ಯಕ್ಷ-ದಯಾನಂದ ಬಳೆಗಾರ್, ಉಪಾಧ್ಯಕ್ಷರು-ಸತೀಶ ಪೂಜಾರಿ, ನಾಗರಾಜ ಪಟಗಾರ್, ಸೋಮಯ್ಯ ಬಿಲ್ಲವ, ಅನಿತಾ ಆರ್. ಕೆ, ಕಾರ್ಯದರ್ಶಿ-ರಾಜೇಶ್ ಆಚಾರ್ಯ, ಜತೆಕಾರ್ಯದರ್ಶಿ-ಸಂತೋಷ ಮೊಗವೀರ, ಕೋಶಾಧಿಕಾರಿ-ಕರುಣಾಕರ ಆಚಾರ್ಯ, ಜತೆ ಕೋಶಾಧಿಕಾರಿ ಅಣ್ಣಪ್ಪ ಖಾರ್ವಿ, ವಿವಿಧ ಪದಾಧಿಕಾರಿ ಹುದ್ದೆಗಳಿಗೆ ದೇವಿದಾಸ ಶ್ಯಾನುಭಾಗ್, ಶೋಭಾ ದೇವಾಡಿಗ, ಸುಜಾತಾ, ರಾಜು ಗಾಂಧಿನಗರ, ಚಂದ್ರ ಮೊಗವೀರ, ವಿಶ್ವನಾಥ ಶ್ಯಾನುಭಾಗ್, ರತ್ನಾಕರ ಪೂಜಾರಿ, ಎಂ. ಅಣ್ಣಪ್ಪ ಬಿಲ್ಲವ, ಎಂ. ಶಂಕರ ಬಿಲ್ಲವ, ಸತ್ಯನಾರಾಯಣ ಹೊಳೆಬಾಗ್ಲು, ಗಣೇಶ ಮಧ್ಯಸ್ಥ, ಎಸ್. ಜನಾರ್ದನ ನಿಯುಕ್ತರಾದರು.