ಮಳೆಗಾಳಿಗೆ ಕುಸಿದ ಶಾಲಾ ಕಟ್ಟಡ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಿನ್ನೆ ಸುರಿದ ಬಾರಿ ಮಳೆಗೆ ತಾಲೂಕಿನ  ಕೆರ್ಗಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದನವನ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿದು ಅಪಾರ ಹಾನಿ ಸಂಭವಿಸಿದೆ.

ಶಾಲೆಯ ಮಧ್ಯಭಾಗದ ಕಟ್ಟಡದ ಗೋಡೆ ಕುಸಿದಿದ್ದು, ಛಾವಣಿ ಹಾರಿ ಹೋಗಿ ಸಂಪೂರ್ಣ ನೆಲಸಮವಾಗಿದೆ. ಇನ್ನೊಂದು ಭಾಗದ ಗೋಡೆಯೂ ಶಿಥಿಲಗೊಂಡಿದ್ದು ಉರುಳುವ ಭೀತಿ ಇದೆ. ಕಳೆದೊಂದು ವಾರದಿಂದ ನಿರಂತರವಾಗಿ ಗಾಳಿಮಳೆ ಸುರಿಯುತ್ತಿದ್ದ ಪರಿಣಾಮ ಶಾಲಾ ಕಟ್ಟಡ ಕುಸಿದಿತ್ತು.

ಶಾಲೆಯಲ್ಲಿ 1 ರಿಂದ 5 ತನಕ ಒಟ್ಟು 15 ಮಕ್ಕಳಿದ್ದಾರೆ. ರಾತ್ರಿ ವೇಳೆಯಾದ್ದರಿಂದ ಮತ್ತು ಕಳೆದ ಮೂರು ದಿನದಿಂದ ಶಾಲೆಗೆ ರಜೆ ಇದ್ದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ. ಶಾಲಾಗೆ 100 ವರ್ಷದ ಇತಿಹಾಸವಿದ್ದು, ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.

,

Leave a Reply

Your email address will not be published. Required fields are marked *

12 − one =