ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಓಕ್ ವುಡ್ ಶಾಲೆಯಲ್ಲಿ ‘ಮಳೆ ನೀರಿನೊಂದಿಗೆ ಅನುಸಂಧಾನ’ ವಿಶೇಷ ಕಾರ್ಯಾಗಾರ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರತ್ನಶ್ರೀ ಜೋಸೆಫ್ ಜಿ ಎಮ್ ರೆಬೆಲ್ಲೊ ಕುಡಿಯುವ ನೀರಿನ ಸಮಸ್ಯೆ “ಮಳೆ ನೀರಿನೊಂದಿಗೆ ಅನುಸಂಧಾನ” ಎಂಬ ವಿಚಾರದ ಬಗ್ಗೆ ವಿಧ್ಯಾರ್ಥಿಗಳಿಗೆ ವಿವರಿಸಿದರು ಮತ್ತು ಅದರಲ್ಲೂ ವಿಶೇಷವಾಗಿ ನೀರಿನ ಹಾಗೂ ಸ್ವಚ್ಚತೆಯ ವಿಚಾರದಲ್ಲಿ ಮಾಹಿತಿ ನೀಡಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮಾಹಿತಿಯನ್ನು ನೀಡಿದರು.
ಪೋಟ್೯ ಗೇಟ್ ಎಜ್ಯುಕೇಶನ್ ಕಾರ್ಯದರ್ಶಿ ನೀತ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ವಿನೋದ ಸುವರ್ಣ ವ್ಯಕ್ತಿ ಪರಿಚಯವನ್ನು ಮಾಡಿದರು ಅವಿಲಾ ಡಿಸೋಜ ಕಾರ್ಯಕ್ರಮದ ಸಾರಾಂಶವನ್ನು ತಿಳಿಸಿದರು. ವಂದನಾರ್ಪಣೆಯನ್ನು ಸಹನಾ ಶೆಟ್ಟಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಮುಖ್ಯಶಿಕ್ಷಕರು ಸಹಶಿಕ್ಷಕರು ಶಾಲೆಯ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.