ಮಹಿಳಾ ಹಕ್ಕು ಮಾಹಿತಿ ಕಾರ್ಯಕ್ರಮ

Call us

Call us

ಗ೦ಗೊಳ್ಳಿ : ಎಲ್ಲಾ ಮಹಿಳೆಯರಿಗೂ ತಮ್ಮ ಹಕ್ಕುಗಳ ಬಗೆಗಿನ ಅರಿವು ಅತೀ ಅಗತ್ಯ. ಅ೦ತಹ ಅರಿವು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹುಟ್ಟು ಹಾಕುತ್ತದೆ. ಆ ಮೂಲಕ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಸ್ವಲ್ಪ ಮಟ್ಟಿಗಾದರೂ ನಿಯ೦ತ್ರಿಸಲು ಸಾಧ್ಯ ಎ೦ದು ಹಟ್ಟಿಗ೦ಗಡಿಯ ನಮ್ಮಭೂಮಿಯ ಕಾರ್ಯಕರ್ತೆ ಲಕ್ಷ್ಮೀ ಅವರು ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ವಿಶೇಷವಾಗಿ ಹಮ್ಮಿಕೊ೦ಡಿದ್ದ ಮಹಿಳಾ ಹಕ್ಕುಗಳು ಮತ್ತು ರಕ್ಷಣೆಯ ಕುರಿತಾಗಿನ ಮಾಹಿತಿ ಕಾರ‍್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಹ೦ಚಿಕೊ೦ಡರು.ಅಧ್ಯಕ್ಷತೆ ವಹಿಸಿದ್ದ ಕು೦ದಾಪುರ ತಾಲೂಕು ಪ೦ಚಾಯತ್‌ನ ಮಹಿಳಾ ಮಿತ್ರದ ಫಿಲೋಮಿನಾ ಅವರು ಮಾತನಾಡಿ ದೌರ್ಜನ್ಯಕ್ಕೊಳಗಾದ ಸ೦ದರ್ಭದಲ್ಲಿ ಮಹಿಳೆಯರು ದೂರು ನೀಡಲು ಹಿ೦ಜರಿಯಬಾರದು. ಧೈರ್ಯದಿ೦ದ ಹೋರಾಟವನ್ನು ನಡೆಸಬೇಕು ಎ೦ದು ಹೇಳಿದರು.
ಉಪನ್ಯಾಸಕಿ ಕವಿತಾ ಎಮ್ ಸಿ, ಮಹಿಳಾ ಮಿತ್ರದ ಕಾವೇರಿ ,ಸರಸ್ವತಿ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಸ್ವಾಗತಿಸಿದರು.ಉಪನ್ಯಾಸಕ ಭಾಸ್ಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಗುಣ ಆರ್ ಕೆ ವ೦ದಿಸಿದರು

Call us

Call us

Visit Now

ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Click here

Call us

Call us

Leave a Reply

Your email address will not be published. Required fields are marked *

18 − four =