ಮಾಣಿ ಜಲಾಶಯ ಮಟ್ಟ ಹೆಚ್ಚಳ: ವರಾಹಿ/ಹಾಲಾಡಿ ನದಿಪಾತ್ರದ ಜನರಿಗೆ ಮುನ್ನೆಚ್ಚರಿಕೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಸೆ.21:
ವರಾಹಿ ಯೋಜನೆಯ ಮಾಣಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದು ಮಾನಿ ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿದೆ. ಸತತವಾಗಿ ಬೀಳುತ್ತಿರುವ ಮಳೆಯಿಂದ ಮಾನಿ ಜಲಾಶಯದ ನೀರಿನ ಮಟ್ಟವು ಏಕಪ್ರಕಾರವಾಗಿ ಏರುತ್ತಿದೆ.

Call us

Click Here

Click here

Click Here

Call us

Visit Now

Click here

ಜಲಾಶಯದ ಗರಿಷ್ಟ ಮಟ್ಟವು 594.36 ಮೀಟರ್ ಆಗಿದ್ದು, ದಿನಾಂಕ: 18.09.2022 ರಂದು ಬೆಳಗ್ಗೆ 6:30 ರ ಸಮಯಕ್ಕೆ ಜಲಾಶಯದ ಮಟ್ಟವು 590.10 ಮೀಟರ್ ತಲುಪಿದ್ದು, ಒಳಹರಿವು 1565 ಕ್ಯೂಸೆಕ್ಸ್ಗಳಷ್ಟು ಇರುತ್ತದೆ. ಇದೇ ರೀತಿ ಜಲಾಶಯಕ್ಕೆ ನೀರಿನ ಒಳಹರಿವು ಮುಂದುವರೆದ ಪಕ್ಷದಲ್ಲಿ ಜಲಾಶಯವು ಗರಿಷ್ಟ ಮಟ್ಟವನ್ನು ತಲುಪುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಣೆಕಟ್ಟು ಸುರಕ್ಷತಾ ದೃಷ್ಠಿಯಿಂದ ಹೆಚ್ಚುವರಿಯಾದ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು. ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ವರಾಹಿ/ಹಾಲಾಡಿ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆಂದು ಈ ಮೂಲಕ ಎಚ್ಚರಿಸಲಾಗಿದೆ.

Leave a Reply

Your email address will not be published. Required fields are marked *

13 − ten =