ಮಾದಕದ್ರವ್ಯ ವ್ಯಸನವೇ ದೇಶದ ದೊಡ್ಡ ಪಿಡುಗು : ಎಸ್ಪಿ ಲಕ್ಷ್ಮಣ ನಿಂಬರ್ಗಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಯುವಕರೇ ಬಹುಸಂಖ್ಯಾತರಿರುವ ನಮ್ಮ ದೇಶದಲ್ಲಿ ಮಾದಕದ್ರವ್ಯ ವ್ಯಸನ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಯುವಜನತೆಯೇ ಹೆಚ್ಚು ವ್ಯಸನಕ್ಕೆ ಬಲಿಯಾಗುತ್ತಿರುವುದು ಖೇದಕರ. ಕಣ್ಣಿಗೆ ಕಾಣದೆ ಆಂತರಿಕವಾಗಿ ನಡೆಯುತ್ತಿರುವ ಈ ದಾಳಿಯನ್ನು ತಡೆಗಟ್ಟುವುದು ಇಂದಿನ ಅಗತ್ಯ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ ಹೇಳಿದರು.

Call us

Call us

Visit Now

ಅವರು ಉಡುಪಿ ಜಿಲ್ಲಾ ಪೊಲೀಸ್‌ ಕುಂದಾಪುರ ಉಪವಿಭಾಗ, ಕುಂದಾಪುರ ತಾಲೂಕು ಪತ್ರಕರ್ತರ ಸಂಘ ಹಾಗೂ ಹಲವಾರು ಸಂಘಸಂಸ್ಥೆಗಳ ಸಂಯುಕ್ತಾ ಶ್ರಯದಲ್ಲಿ ಕುಂದಾಪುರ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಮಾದಕದ್ರವ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸೆ ನೋ ಟುಡ್ರಗ್ಸ್‌ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸೈಕ್ಲಾಥಾನ್‌ನ ಸಮಾರೋಪ ಸಮಾರಂಭ ವನ್ನುದ್ದೇಶಿಸಿ ಮಾತನಾಡಿದರು.

Click here

Call us

Call us

ಸುಮಾರು ೨೫ ಕಿ.ಮೀ ಅಧಿಕ ದೂರಗಳ ಕಾಲ ಸೈಕಲ್‌ಜಾಥಾ ನಡೆಯಿತು. ಕುಂದಾಪುರ ಉಪವಿಭಾಗದ ಸಹಾಯಕಆಯುಕ್ತ ಟಿ. ಭೂಬಾಲನ್, ತಹಸೀಲ್ದಾರ್ ತಿಪ್ಪೇಸ್ವಾಮಿ, ಡಿವೈಎಸ್‌ಪಿ ಬಿ. ಪಿ ದಿನೇಶ್‌ಕುಮಾರ್, ಸರ್ಕಲ್‌ಇನ್ಸ್‌ಪೆಕ್ಟರ್ ಮಂಜಪ್ಪ, ಪರಮೇಶ್ವರ ಗುನಗಾ, ಕುಂದಾಪುರ ಪಿಎಸ್‌ಐ ಹರೀಶ್‌ಆರ್, ಕಂಡ್ಲೂರು ಪಿಎಸ್‌ಐ ಶ್ರೀಧರ ನಾಯ್ಕ್, ಬೈಂದೂರು ಪಿಎಸ್‌ಐತಿಮ್ಮೇಶ್ ಬಿ.ಎನ್, ಗಂಗೊಳ್ಳಿ ಪಿಎಸ್‌ಐ ವಾಸಪ್ಪ ನಾಯ್ಕ್ ಹಾಗೂ ಸಿಬ್ಬಂದಿಗಳು, ಜಿಲ್ಲಾ ಪತ್ರಕರ್ತರ ಸಂಘದಜೊತೆ ಕಾರ್ಯದರ್ಶಿ ಮೈಕಲ್ ಸಾಸ್ತಾನ, ಕುಂದಾಪುರತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು, ಕುಂದಾಪುರ ಸೈಕಲ್‌ಕ್ಲಬ್ ಹಾಗೂ ಸಾರ್ವಜನಿಕರು ಸೈಕಲ್‌ಜಾಥಾದಲ್ಲಿ ಪಾಲ್ಗೊಂಡರು.  ಲಕ್ಕಿ ಕೂಪನ್‌ಡ್ರಾದಲ್ಲಿ ಪುಟಾಣಿ ಪೂರ್ವಿ ಸೈಕಲ್ ಗೆದ್ದುಕೊಂಡಳು. ಸುಮಾರುಇನ್ನೂರಕ್ಕೂಅಧಿಕ ಮಂದಿ ಸೈಕಲ್‌ಜಾಥಾದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

eighteen + 1 =