ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಯಲ್ಲಿ ವಾರ್ಷಿಕ ಹಾಲು ಹಬ್ಬ, ಗೆಂಡಸೇವೆ, ಜಾತ್ರೆ ವೈಭವ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪುರಾಣ ಪ್ರಸಿದ್ಧ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಯಲ್ಲಿ ಮಕರ ಸಂಕ್ರಮಣದ ಶುಭದಿನದಂದು ವಾರ್ಷಿಕ ಹಾಲು ಹಬ್ಬ, ಗೆಂಡಸೇವೆ, ಜಾತ್ರೆ ವೈಭವದಿಂದ ಜರುಗಿತು. ಬೆಳಿಗ್ಗಿನಿಂದ ದೇವಳದಲ್ಲಿ ಧಾರ್ಮಿಕ ವಿಧಿಗಳು ಜರುಗಿದವು.

Call us

Call us

ಸಿಂಗಾರ ಮತ್ತು ಸೇವಂತಿಗೆ ಬ್ರಹ್ಮಲಿಂಗೇಶ್ವರನಿಗೆ ಪ್ರಿಯವಾದುದರಿಂದ ಬುಟ್ಟಿಯಲ್ಲಿ ಅವುಗಳನ್ನು ಹೊತ್ತು ಭಕ್ತರು ಸರದಿಯಲ್ಲಿ ಕಾಣಿಕೆ ಸಲ್ಲಿಸಿದರು. ನಾಡಿನ ವಿವಿಧೆಡೆಗಳಲ್ಲಿ ನೆಲೆಸಿರುವ ಭಕ್ತರು ಜಾತ್ರೆಯ ಸಂದರ್ಭದಲ್ಲಿ ಮಾರಣಕಟ್ಟೆಗೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.

ಜ. 14ರಿಂದ ಜ. 16ರ ವರೆಗೆ ಮಾರಣಕಟ್ಟೆ ಕ್ಷೇತ್ರದಲ್ಲಿ ಮಹಾ ಮಂಗಳಾರತಿ ಅನಂತರ ಮಂಡಲ ಸೇವೆ ಜರಗಲಿದೆ. ಕುಂದಾಪುರ, ಬೈಂದೂರು ಹಾಗೂ ಉಡುಪಿ ತಾಲೂಕಿನಿಂದ ಆಗಮಿಸಿದ ಭಕ್ತರಿಗೆ ಸಕಲ ಸೌಕರ್ಯ ಒದಗಿಸುವಲ್ಲಿ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಹೆಚ್ಚಿನ ಕಾಳಜಿ ವಹಿಸಿ ಪೊಲೀಸರೊಡನೆ ಸಹಕರಿಸಿದರು.

Leave a Reply

Your email address will not be published. Required fields are marked *

one × five =