ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಗುಜ್ಜಾಡಿಯ ಮಾರಿಕಾಂಬ ಮಹಿಳಾ ಸಹಕಾರಿ ಸಂಘದ ೨ನೇ ವಾರ್ಷಿಕ ಮಹಾಸಭೆ ತ್ರಾಸಿಯ ಅಂಬೇಡ್ಕರ್ ಸಭಾಭವನದಲ್ಲಿ ಭಾನುವಾರ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ನಿರ್ದೇಶಕರಾದ ಸುರೇಖಾ ಕಾನೋಜಿ, ಮಹಾಲಕ್ಷ್ಮೀ, ಶಾರದಾ, ಶಾಂತಾ, ರೇಖಾ, ಚೌಕಿ ಪುಷ್ಪ ಖಾರ್ವಿ, ಲಲಿತಾ ಖಾರ್ವಿ, ಶ್ಯಾಮಲಾದೇವಿ, ರತ್ನಾ ಟಿ.ದೇವಾಡಿಗ, ಸುನೀತಾ ಪೂಜಾರಿ, ಶಾಂತಾ ಮರಾಠಿ ನಾಯ್ಕ್ ಉಪಸ್ಥಿತರಿದ್ದರು. ಉಡುಪಿ ಮಹಿಳಾ ಅಭಿವೃದ್ಧಿ ನಿಗಮದ ಸಂಯೋಜಕ ಅವಿನಾಶ್ ಅವರು ಮಹಿಳೆಯರ ಅಭಿವೃದ್ಧಿ ಹಾಗೂ ಸ್ವ ಉದ್ಯೋಗದ ಮಾಹಿತಿ ನೀಡಿದರು.
ಶ್ರೀಲವಿ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾಮಿಲಿಂಗೇಶ್ವರ ವರದಿ ವಾಚಿಸಿದರು. ಭಾಸ್ಕರ ಗಾಣಿಗ ಕೊಡಪಾಡಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ವಿಜಯಾ ಬಿ.ಗಾಣಿಗ ವಂದಿಸಿದರು.