‘ಮಾರ್ಚ್ ಫಾರ್ ಸೆಕ್ಯೂರ್ ಕೋಡ್’ ಸ್ಪರ್ಧೆ: ಮೂಡ್ಲಕಟ್ಟೆ ಎಂಐಟಿ ಕಾಲೇಜಿನ ಶಶಾಂಕ್ ಪ್ರಥಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೈಬರ್ ಸೆಕ್ಯೂರಿಟಿ ಉತ್ಕೃಷ್ಟತೆಯ ಕೇಂದ್ರ, ಕರ್ನಾಟಕ ಮತ್ತು ರಾಷ್ಟ್ರೀಯ ಸಾಫ್ಟ್‌ವೇರ್ & ಸರ್ವಿಸ್ ಕಂಪನಿಗಳ ಅಸೋಸಿಯೇಷನ್ ವತಿಯಿಂದ ನಡೆಸಲ್ಪಟ್ಟ ‘ಮಾರ್ಚ್ ಫಾರ್ ಸೆಕ್ಯೂರ್ ಕೋಡ್’ ಎಂಬ ಅತೀ ಬೇಗ ಕೋರ್ಸ್ ಮುಗಿಸುವ ಸ್ಪರ್ಧೆಯಲ್ಲಿ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಶಶಾಂಕ್ 10000 ರೂ ನಗದು ಬಹುಮಾನದೊಂದಿಗೆ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

Click here

Click Here

Call us

Call us

Visit Now

Call us

Call us

ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಸುಮೀತ್ ಕುಮಾರ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಕೋರ್ಸ್ ನ ವಿಜೇತರಿಗೆ ಏಪ್ರಿಲ್ 17 ಮತ್ತು 18ರಂದು ಅಡ್ವಾನ್ಸಡ್ ಸ್ಕಿಲ್ ಡೆವಲಮೆಂಟ್ ತರಬೇತಿ ಕೇಂದ್ರ ನಡೆಸುವ ಗ್ರ್ಯಾಂಡ್ ಫೈನಲ್ ಸ್ಪರ್ಧೆಗೆ ಅವಕಾಶ ಸಿಕ್ಕಿದ್ದು, ವಿಜೇತರಿಗೆ 25000 ನಗದು ಬಹುಮಾನ ದೊರಕಲಿದೆ.

ಸಿಕ್ಕಿದ ಸಮಯವನ್ನ ಸರಿಯಾದ ರೀತಿಯಲ್ಲಿ ಕಲಿಕೆಗಾಗಿ ಉಪಯೋಗಿಸಿ ಶಶಾಂಕ್ ಇಂದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದದ್ದು ಹೆಮ್ಮೆಯ ವಿಷಯವಾಗಿದೆ. ಅಲ್ಲದೆ ಕಾಲೇಜಿನ 6 ಪ್ರಾಜೆಕ್ಟ್ ತಂಡಗಳು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾ ಮಂಡಳಿಯಿಂದ ಪಡೆಯುವ ಅನುದಾನಕ್ಕೆ ಆಯ್ಕೆಯಾಗಿದ್ದು ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿಸುವುದಕ್ಕೆ ಸಾಕ್ಷಿಯಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ದಾರ್ಥ್ ಜೆ. ಶೆಟ್ಟಿ ತಿಳಿಸಿದ್ದಾರೆ.

ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರರಾವ್ ಮದಾನೆ, ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ಎಲ್ಲಾ ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

4 × one =