ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಆಶ್ರಯದಲ್ಲಿ ಮತ್ತು ರೋಟರಿ ಸಮುದಾಯ ದಳ, ತಲ್ಲೂರು ಸಹಭಾಗಿತ್ವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಇದರ ವಠಾರದಲ್ಲಿ ಉಚಿತ ರಕ್ತ ವರ್ಗೀಕರಣ ಶಿಬಿರ ನಡೆಯಿತು.
ರೋಟರಿ ದಕ್ಷಿಣದ ಪರವಾಗಿ ಮಾಜಿ ಅಧ್ಯಕ್ಷ ಮತ್ತು ಆರ್ಸಿಸಿ ಸಭಾಪತಿ ರೊ.ಕೆ.ಪಿ.ಭಟ್, ಮಾಜಿ ಕಾರ್ಯದರ್ಶಿ ಪ್ರಕಾಶ ನಾಯಕ್, ರೋಟರಿ ಸಮುದಾಯ ದಳದ ಅಧ್ಯಕ್ಷ ಬನಾವಳಿಕರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.ಮೊದಲು ನಡೆದ ಸರಳ ಸಮಾರಂಭದಲ್ಲಿ ರಕ್ತ ವರ್ಗೀಕರಣದ ಮಹತ್ವದ ಬಗ್ಗೆ ತಿಳಿಸಲಾಯಿತು. ನವೀನ ಡಿಸೋಜ ಮತ್ತು ಸಹದ್ಯೋಗಿಗಳು ವರ್ಗೀಕರಣದ ನೇತೃತ್ವ ವಹಿಸಿದ್ದರು.
ಸುಮಾರು 195 ಜನರ ರಕ್ತದ ಗುಂಪನ್ನು ಗುರುತಿಸಿ ಕಾರ್ಡ ನೀಡಲಾಯಿತು.ಶಾಲೆಯ ಮಕ್ಕಳು ಮತ್ತು ಸ್ಥಳೀಯ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಒಕ್ಕೂಟ ಇದರು ಸ್ತ್ರೀ ಶಕ್ತಿ ಸಂಘದ ಮಹಿಳಾ ಸದಸ್ಯರು ಇದರ ಪ್ರಯೋಜನ ಪಡೆದರು.