ಮಾಹಿತಿ ಸಂವಹನ ತಂತ್ರಜ್ಞಾನದ ಪರಿಣಾಮಕಾರಿ ಉಪಯೋಗ ವೆಬಿನಾರ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಸ್ತುತದ ದಿನಗಳಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನವೆನ್ನುವುದು ನಮ್ಮ ಅನಿವಾರ್ಯ ಅಗತ್ಯಗಳಲ್ಲಿ ಒಂದಾಗಿದೆ. ಅಲ್ಲದೇ ಶೈಕ್ಷಣಿಕ ನೆಲೆಯಿಂದ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಅಧ್ಯಕ್ಷರಾದ ಡಾ. ಹೆಚ್. ಎಸ್. ಬಲ್ಲಾಳ್ ಅವರು ಹೇಳಿದರು.

Click Here

Call us

Call us

ಅವರು ಇಲ್ಲಿನ ಭಂಡಾರ್ಕಾರ‍್ಸ್ ಕಾಲೇಜಿನ ಐಕ್ಯೂಎಸಿ ಮತ್ತು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಸಹಯೋಗದಲ್ಲಿ ನಡೆದ ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುವಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಪರಿಣಾಮಕಾರಿ ಉಪಯೋಗ’ ಎಂಬ ವಿಷಯದ ಕುರಿತು ರಾಷ್ಟ್ರೀಯ ವೆಬಿನಾರ್ ನಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Click here

Click Here

Call us

Visit Now

ಈಗಿನ ಸಂದಿಗ್ದ ಸಂದರ್ಭದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಉಪಯೋಗ ಬಹಳವಿದೆ. ವಿವಿಧ ತೆರನಾದ ಮಾಹಿತಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ತರಗತಿಗಳನ್ನು ತೆಗೆದುಕೊಳ್ಳುವುದು ಮತ್ತು ವಿದ್ಯಾರ್ಥಿಗಳಿಗೆ ಅತ್ಯಂತ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ವೆಬಿನಾರ್‌ನ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಮಾಹೆಯ ಎಮ್.ಎಸ್. ಒ. ಐ. ಎಸ್‌ನ್ ಸಹಾಯಕ ಪ್ರಾಧ್ಯಾಪಕರಾದ ನಂದೀಶ್. ಎಸ್. ’ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುವಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಪರಿಣಾಮಕಾರಿ ಉಪಯೋಗ’ ಕುರಿತು ಮಾತನಾಡಿದರು. ಅವರು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುವಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನದ ಉಪಯೋಗ ಮತ್ತು ಅದರ ಸಾಧ್ಯತೆಗಳನ್ನು ಮತ್ತು ಉಪಯೋಗಿಸಿಕೊಳ್ಳುವಲ್ಲಿನ ತಾಂತ್ರಿಕ ಸವಾಲುಗಳನ್ನು ತಿಳಿಸಿದರು. ಅಲ್ಲದೇ ಮೈಕ್ರೊಸಾಫ್ಟ್ ಟೀಮ್ಸ್ ಮತ್ತು ಸ್ಟ್ರೀಮ್ಸ್ ಆನ್‌ಲೈನ್ ತಂತ್ರಜ್ಞಾನವನ್ನು ಸರಳವಾಗಿ ಬಳಸುವ ರೀತಿ ಮತ್ತು ಉಪಯೋಗವನ್ನು ತಿಳಿಸಿದರು. ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುವಲ್ಲಿ ಪ್ರಾಯೋಗಿಕವಾಗಿ ಅತ್ಯಂತಸೂಕ್ತ ಮತ್ತು ಸುಲಭದ ಒಂದು ಮಾದರಿ ಇದಾಗಿದೆ ಎಂದು ಹೇಳಿದರು. ಆನ್‌ಲೈನ್ ವೆಬಿನಾರ್‌ನಲ್ಲಿ ಭಾಗವಹಿಸಿದವರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

13 ದೇಶಗಳು ಮತ್ತು 34 ರಾಜ್ಯಗಳ 2200ಕ್ಕಿಂತ ಹೆಚ್ಚು ಸಂಖ್ಯೆಯ ಜನರು ನೊಂದಾವಣೆಗೊಂಡು ಅದರಲ್ಲಿ ಸುಮಾರು 1200 ಜನರು ವೆಬಿನಾರ್‌ನಲ್ಲಿ ಭಾಗವಹಿಸಿದ್ದರು.

Call us

ಭಂಡಾರ್ಕಾರ‍್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಶಶಿಕಾಂತ್ ಹತ್ವಾರ್ ಕಾಲೇಜಿನ ಐಟಿ ತಂಡದ ಸಂಯೋಜಕರಾದ ಡಾ. ನಟರಾಜ್‌ಎಮ್. ಬಿ ಮತ್ತು ಅವರ ತಂಡದ ಸದಸ್ಯರಾದ ಅಮರ್ ಸಿಕ್ವೆರಾ, ಪ್ರವೀಣ್, ಗಣೇಶ್, ಗುರುದಾಸ್ ಪ್ರಭು, ಶಂಕರನಾರಾಯಣ ಉಪಾಧ್ಯಾಯ ಮತ್ತು ವಿಕ್ರಮ್ ಇವರುಗಳು ತಾಂತ್ರಿಕವಾಗಿ ಸಹಕರಿಸಿದರು. ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಜೆವಿಲ್ಲಾ ರೋಡ್ರಿಗಸ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Leave a Reply

Your email address will not be published. Required fields are marked *

two + twelve =