ಮಾ.26ರಂದು ಮೂಡ್ಲಕಟ್ಟೆ ವಿದ್ಯಾ ಅಕಾಡೆಮಿಯಿಂದ ಮಕ್ಕಳಿಗಾಗಿ – ಕಿಡ್ಸ್ ಕಾರ್ನಿವಲ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮೂಡ್ಲಕಟ್ಟೆ ನಾಗರತ್ನ ಭುಜಂಗ ಶೆಟ್ಟಿ ಟ್ರಸ್ಟ್ ನಡೆಸುತ್ತಿರುವ ವಿದ್ಯಾ ಅಕಾಡೆಮಿಯು ಮಾರ್ಚ್ 26 ರ ರವಿವಾರ ಸಂಜೆ 4 ಗಂಟೆಗೆ ಚಿಕ್ಕ ಮಕ್ಕಳಿಗಾಗಿ ಕುಂದಾಪುರಲ್ಲಿ ಮೊದಲ ಬಾರಿಗೆ ಕಿಡ್ಸ್ ಕಾರ್ನಿವಲ್ ಅನ್ನು ಆಯೋಜಿಸಿದೆ.

Call us

Click here

Click Here

Call us

Call us

Visit Now

Call us

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸಲಹೆಗರಾರು ಮತ್ತು ಎಂಐಟಿಕೆ ಉಪ ಪ್ರಾಂಶುಪಾಲರಾದ ಪ್ರೊ. ಮೆಲ್ವಿನ್ ಡಿ ಸೋಜಾ ಮಾಹಿತಿ ನೀಡಿ ಈ ಕಾರ್ನಿವಲ್ ಮುಖಾಂತರ ಚಿಕ್ಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಿ, ವಿವಿಧ ಸ್ಥಳಗಳ ಮತ್ತು ವಿವಿಧ ಶಾಲೆಗಳ ಮಕ್ಕಳೊಂದಿಗೆ ಬೆರೆತು, ಹಲವು ಮನೋರಂಜನೆ ಮತ್ತು ಆಟೋಟ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂತೋಷ ಪಡಲು ಅವಕಾಶ ಮಾಡಿ ಕೊಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆಗೆ, ಅವರ ಪೋಷಕರಿಗೂ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಮಕ್ಕಳಲ್ಲಿ ಅತೀವಸಂತೋಷದ ವಾತಾವರಣ ಉಂಟುಮಾಡಲು ಪ್ರಯತ್ನಿಸಲಾಗುವುದು. ಹಲವು ಆಟೋಟಗಳ ಜೊತೆಗೆ ಮಕ್ಕಳ ಪ್ರತಿಭೆಗಳನ್ನ ಪ್ರದರ್ಶಿಸಲು ಮುಕ್ತ ಅವಕಾಶ ನೀಡಲಾಗುವುದು. ಹಾಗೆ ಮಕ್ಕಳಿಗೆ ಇಷ್ಟ ಆಗುವ ತಿಂಡಿ ತಿನಿಸುಗಳ ಸ್ಮಾಲ್ ಗಳ ವ್ಯವಸ್ಥೆ ಕೂಡ ಮಾಡಲಾಗುವುದು. ಅಲ್ಲದೆ ಕಾರ್ಯಕ್ರಮದ ರಂಗು ಏರಿಸಲು ಮ್ಯಾಜಿಕ್ ಶೋ ಕೂಡ ಏರ್ಪಡಿಸಲಾಗಿದೆ. ಸ್ಥಳದಲ್ಲಿಯೇ ಮಕ್ಕಳಿಗೆ ಹಲವು ಗೇಮ್ಸ್ ಗಳನ್ನ ಮತ್ತು ಕ್ವಿಜ್ ಗಳನ್ನ ಮಾಡಿ ಮಕ್ಕಳಿಗೆ ಎಲ್ಲರ ಜೊತೆ ವಿಲೀನ ಗೊಳ್ಳುವ ಮನೋಭಾವ ವೃದ್ಧಿಸಲು ಕೂಡ ಪ್ರಯತ್ನಿಸಲಾಗುವುದು.

ಈ ಕಾರ್ಯಕ್ರಮ ಕ್ಕೆ ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ. ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಎಂ ಎನ್ ಬಿ ಎಸ್ ಟ್ರಸ್ಟ್ ಭರಿಸುತ್ತದೆ.

ಐಎಂಜೆ ವಿದ್ಯಾ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗ್ಡೆ, ವಿದ್ಯಾ ಅಕಾಡೆಮಿ ಶಾಲೆಯ ಮುಖ್ಯಸ್ಥೆ ರಶ್ಮಿಶೆಟ್ಟಿ ಉಪಸ್ಥಿತರಿದ್ದರು.

Call us

Leave a Reply

Your email address will not be published. Required fields are marked *

15 + 12 =