ಮಾ.31 ಕ್ಕೆ ಗಿಳಿಯಾರಿನಲ್ಲಿ ಜನಸೇವಾ ಟ್ರಸ್ಟ್ ಅನಾವರಣ, ಅಭಿಮತ ದಶಮ ಸಂಭ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಗಿಳಿಯಾರು ಜನಸೇವಾ ಟ್ರಸ್ಟ್ ಅನಾವರಣ ಹಾಗೂ ಅಭಿಮತ ಪತ್ರಿಕೆಯ ದಶಮಾನೋತ್ಸವ ಮಾ.31ರಂದು ಮೂಡುಗಿಳಿಯಾರು ಹಿ.ಪ್ರಾ.ಶಾಲೆ ಮೈದಾನದಲ್ಲಿ ಜರಗಲಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಅಶೋಕ್ ಶೆಟ್ಟಿ ಬನ್ನಾಡಿ ಸೋಮವಾರ ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಾರ್ಯಕ್ರಮ ಬೆಳಗ್ಗೆ 9ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಅನಂತರ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ದೇರಳಕಟ್ಟೆ ಇಲ್ಲಿನ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ, ಗಿಳಿಯಾರು ದಿ| ಐತ ಪೂಜಾರಿ ಸ್ಮರಣಾರ್ಥ ನೇತ್ರದಾನಕ್ಕೆ ಹೆಸರು ನೋಂದಣಿ ಶಿಬಿರ ನಡೆಯಲಿದೆ.

ಸಂಜೆ 6 ಗಂಟೆಯಿಂದ ಕಾವ್ಯಶ್ರೀ ಅಜೇರು ಇವರಿಂದ ಯಕ್ಷರಸಕಾವ್ಯ, ಜಿಲ್ಲಾ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ, ಮೂಡುಬಿದ್ರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವಾ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ. ಕರ್ನಾಟಕ ಪಶ್ಚಿಮ ವಲಯ ಐ.ಜಿ.ಪಿ. ಅರುಣ್ ಚಕ್ರವರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಚಿಕ್ಕಮಂಗಳೂರು ಎಸ್.ಪಿ. ಅಣ್ಣಾಮಲೈ ಜನಸೇವಾ ಟ್ರಸ್ಟ್ ಅನಾವರಣಗೊಳಿಸಲಿದ್ದಾರೆ ಹಾಗೂ ಅನೇಕ ಗಣ್ಯರು ಉಪಸ್ಥಿತರಿರುವರು.

ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಿದ ಮನು ಹಂದಾಡಿ, ರವಿ ಬಸ್ರೂರು, ಟಿ.ವಿ.ನಿರೂಪಕ ರಾಘವೇಂದ್ರ ಕಾಂಚನ್ ಪಡುಕರೆ, ರಾಘವೇಂದ್ರ ಶೆಟ್ಟಿ ಹಂಡಿಕೆರೆ ಅವರನ್ನು ಸಮ್ಮಾನಿಸಲಾಗುವುದು. ರವಿ ಬಸ್ರೂರು ಸಾರಥ್ಯದಲ್ಲಿ ನಿರ್ಮಾಣಗೊಂಡ ಪ್ರತಿಭಾನ್ವೇಷಣೆ -2 ಅಲ್ಬಮ್ ಬಿಡುಗಡೆ, ಸೆಲ್ಪಿ ವಿಥ್ ಅಮ್ಮ ಅಭಿಯಾನದ ವಿಜೇತರಿಗೆ ಬಹುಮಾನ ವಿತರಣೆ, ಸೀಡ್ ಬಾಲ್ ವಿತರಣೆ, ಬಡ ಕುಟುಂಬದ ಬಾಲಕಿಯನ್ನು ಶೈಕ್ಷಣಿಕವಾಗಿ ದತ್ತುಪಡೆದುಕೊಳ್ಳುವ ಕಾರ್ಯಕ್ರಮ ಹಾಗೂ ಝೀ ವಾಹಿನಿಯ ಸರಿಗಮಪ ಖ್ಯಾತಿಯ ಸಾನ್ವಿ ಶೆಟ್ಟಿಯಿಂದ ನೃತ್ಯವೈಭವ ನಡೆಯಲಿದೆ ಎಂದು ತಿಳಿಸಿದರು.

ಖಜಾಂಚಿ ಅರುಣ ಶೆಟ್ಟಿ ಪಡುಮನೆ, ಕಾರ್ಯಕ್ರಮದ ಉಸ್ತುವಾರಿ ಅರುಣ ಶೆಟ್ಟಿ ಉಳ್ತೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

five + 7 =