ಮಾ.6ಕ್ಕೆ ತೆಕ್ಕಟ್ಟೆಯಲ್ಲಿ ಬೃಹತ್ ವಿಶ್ವ ಹಿಂದೂ ಸಮಾಜೋತ್ಸವ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಹಿಂದೂ ಸಮಾಜದ ಸಾಮರಸ್ಯ, ದೇಶಪ್ರೇಮವನ್ನು ಸಾರುವ, ಸ್ವಾಭಿಮಾನಿ ಯುವಕರನ್ನು ರೂಪಿಸುವ ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ತೆಕ್ಕಟ್ಟೆ ಘಟಕದ ಆಶ್ರಯದಲ್ಲಿ ವಿರಾಟ ಹಿಂದೂ ಸಮಾಜೋತ್ಸವ ಮಾ.6 ಭಾನುವಾರ ಮಧ್ಯಾಹ್ನ ತೆಕ್ಕಟ್ಟೆ ಹೈಸ್ಕೂಲ್ ಮುಂಭಾಗದಲ್ಲಿ ಆಯೋಜಿಸಲಾಗಿದ್ದು ಸುಮಾರು ೫ ಸಾವಿರಕ್ಕೂ ಅಧಿಕ ಹಿಂದೂ ಭಾಂದವರು ಸಮಾರಂಭಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Call us

Call us

ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಬೃಹತ್ ಶೋಭಾಯಾತ್ರೆ, ಬೈಕ್ ರ‍್ಯಾಲಿ ನಡೆಯಲಿದ್ದು ಪ್ರತಿ ಗ್ರಾಮಗಳಿಂದಲೂ ಯುಕವರು, ವಿದ್ಯಾರ್ಥಿಗಳು, ಹಿಂದೂ ಸಮಾಜ ಭಾಂದವರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ. ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರ ಆನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ವಿಹಿಂಪ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿವಿಧ ಹಿಂದೂ ಸಂಘಟನೆಯ ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸಮಾಜೋತ್ಸವದ ಹಿನ್ನೆಲೆಯಲ್ಲಿ ತೆಕ್ಕಟ್ಟೆ ಪರಿಸರವನ್ನು ಸಂಪೂರ್ಣ ಕೇಸರಿಮಯಗೊಳಿಸಿದ್ದು, ಇಡೀ ಸಮಾಜೋತ್ಸವ ಸಂಪೂರ್ಣ ಯಶಸ್ವಿಯಾಗಿ ಜರುಗುವ ವಿಶ್ವಾಸವಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಜರಂಗದಳ ಜಿಲ್ಲಾ ಸಹಸಂಚಾಲಕ ಗಿರೀಶ್ ಕುಂದಾಪುರ, ವಿಹಿಂಪ ಅಧ್ಯಕ್ಷ ರತಜ್ ತೆಕ್ಕಟ್ಟೆ, ಬಜರಂಗದಳ ಸಂಚಾಲಕ ಶ್ರೀನಾಥ ತೆಕ್ಕಟ್ಟೆ, ಸುರೇಂದ್ರ, ಅವಿನಾಶ್ ಉಪಸ್ಥಿತರಿದ್ದರು.

Call us

Call us

Leave a Reply

Your email address will not be published. Required fields are marked *

12 − nine =