ಮೀನುಗಾರಿಕೆ ಇಲಾಖೆ ವತಿಯಿಂದ ವಿವಿಧ ಕಾರ್ಯಕ್ರಮ ಅನುಷ್ಠಾನ: ಅರ್ಜಿ ಆಹ್ವಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಪ್ರಸಕ್ತ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ವತಿಯಿಂದ ಜಿಲ್ಲಾ ಮತ್ತು ರಾಜ್ಯ ವಲಯದ ಯೋಜನೆಯಡಿಯಲ್ಲಿ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಜಿಲ್ಲೆಯ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

Call us

Call us

ಮೀನುಗಾರಿಕೆಯಲ್ಲಿ ಆಸಕ್ತಿ, ಅನುಭವ ಇರುವ ಅರ್ಹ ಫಲಾನುಭವಿಗಳು ಉಚಿತವಾಗಿ ಮೀನುಗಾರಿಕಾ ಸಲಕರಣೆ ಕಿಟ್ಟುಗಳು (ವಿಶೇಷ ಘಟಕ ಯೋಜನೆ), ಮೀನು ಮಾರಾಟಕ್ಕೆ ವಾಹನ ಖರೀದಿಗೆ ಸಹಾಯ, ಜೀವರಕ್ಷಕ ಸಾಧನಗಳನ್ನು ಮತ್ತು ಇತರ ಕಾರ್ಯಕ್ರಮಗಳ ಲಾಭ ಪಡೆಯಬಹುದು. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಕಚೇರಿಯನ್ನು ಸಂಪರ್ಕಿಸುವಂತೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Call us

Call us

Leave a Reply

Your email address will not be published. Required fields are marked *

8 + 9 =