ಮುಂಬೈ ಬಿಲ್ಲವರ ಅಸೋಸಿಯೇಶನ್‌‌: ಶೈಕ್ಷಣಿಕ ನೆರವು ವಿತರಣೆ

Call us

ಮುಂಬೈ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ನಲಸೋಪರ-ವಿರಾರ್‌ ಸ್ಥಳೀಯ ಕಚೇರಿಯ ವತಿಯಿಂದ ಶೈಕ್ಷಣಿಕ ನೆರವು ವಿತರಣೆ ಸಮಾರಂಭ ಜೂ. 28ರಂದು ನಲಸೋಪರ (ಪೂ.) ಆಚೋಲೆ ಗಣಪತಿ ಮಂದಿರದ ಸಭಾಗೃಹದಲ್ಲಿ ಜರಗಿತು.

ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಗಣೇಶ್‌ ವಿ. ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀನಿವಾಸ ನಾಯ್ಡು ಮಾತ ನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರದ್ಧೆ, ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಬಿಲ್ಲವರ ಅಸೋಸಿ ಯೇಶನ್‌ನ ಸಮಾಜಪರ ಯೋಜನೆಗಳ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಿಗೆ ನನ್ನ ಪ್ರೋತ್ಸಾಹ, ಸಹಕಾರ ಸದಾವಿರುತ್ತದೆ.

Call us

ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಸ್ಥೆಯ ಋಣ ತೀರಿಸುವ ಕಾರ್ಯದಲ್ಲಿ ಮುಂದಾಗಬೇಕು ಎಂದರು.
ಮತ್ತೋರ್ವ ಅತಿಥಿ ಕೇಂದ್ರ ಕಚೇರಿಯ ಜತೆ ಕಾರ್ಯದರ್ಶಿ ಧನಂಜಯ ಕೋಟ್ಯಾನ್‌ ಮಾತನಾಡಿ, ಅಸೋಸಿಯೇಶನ್‌ನ ವಿದ್ಯಾ ಉಪಸಮಿತಿಯು ವಿದ್ಯಾಭ್ಯಾಸಕ್ಕಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಸಭೆಯ ಮುಂದಿಟ್ಟರು. ಸಂಸ್ಥೆಯ ಯೋಜನೆಗಳ ಪ್ರಯೋಜನವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದರು.

ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಜಗದೀಶ್‌ ಆರ್‌. ಅಮೀನ್‌, ಗೌರವ ಕಾರ್ಯದರ್ಶಿ ಆನಂದ ಸಿ. ಕೋಟ್ಯಾನ್‌, ಗೌರವ ಕೋಶಾಧಿಕಾರಿ ಪ್ರಮೋದ್‌ ಎಸ್‌. ಸುವರ್ಣ ಉಪಸ್ಥಿತರಿದ್ದರು.
ಯುವಾಭ್ಯುದಯ ಸಮಿತಿಯ ಕಾರ್ಯದರ್ಶಿ ಸದಾಶಿವ ಕರ್ಕೇರ ಮಾತ ನಾಡಿ, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಮಾಜಪರ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಬೇಕು ಎಂದು ಹೇಳಿದರು.

ಕಾರ್ಯಾಧ್ಯಕ್ಷ ಗಣೇಶ್‌ ವಿ. ಸುವರ್ಣ ಮಾತನಾಡಿ, ಸಮಾಜ ಬಾಂಧವರಿಗೆ ಹಾಗೂ ನೆರೆದ ವಿದ್ಯಾರ್ಥಿಗಳಿಗೆ ಸ್ಥಳೀಯ ಕಚೇರಿಯ ಎಲ್ಲಾ ಕಾರ್ಯಕ್ರಮಗಳಿಗೆ ಬಂದು ಸಹಕರಿಸಬೇಕು. ನಮ್ಮ ಸಮಾಜದ ಸಂಸ್ಕೃತಿಯನ್ನು ಪಾಲಕರು ಮಕ್ಕಳಿಗೆ ಕಲಿಸಬೇಕು. ಸಮಿತಿಯ ಸದಸ್ಯರು ನಮ್ಮ ಕಾರ್ಯಕ್ರಮಗಳನ್ನು ಸಮಾಜ ಬಾಂಧವರ ಮನೆ-ಮನಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಸಮಿತಿಯ ಸ್ಥಾಪಕ ಸದಸ್ಯರು, ಮಹಿಳೆಯರು, ವಿದ್ಯಾರ್ಥಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಆನಂದ ಸಿ. ಕೋಟ್ಯಾನ್‌ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

10 − five =