ಮುಂಬೈ: ಯಕ್ಷಗಾನ ಕಲಾವಿದ ದೇವಲ್ಕುಂದ ಭಾಸ್ಕರ ಶೆಟ್ಟಿ ಅವರಿಗೆ ಯಕ್ಷ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ
ಮುಂಬೈ ವರದಿ: ಶ್ರೀ ಮಹಾವಿಷ್ಣು ಬಂಟ ಯಕ್ಷ ಕಲಾವೇದಿಕೆಯ ವಾರ್ಷಿಕೋತ್ಸವ ಮತ್ತು ಸ್ನೇಹಕೂಟದ ಸಮಾರಂಭ ಇತ್ತಿಚೆಗೆ ಮುಂಬೈ ಬಂಟರ ಸಂಘದಲ್ಲಿ ಜರುಗಿತು. ಸಮಾರಂಭದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ, ತೆಂಕು ಮತ್ತು ಬಡಗು ತಿಟ್ಟುಗಳ ಭಾಗವತ, ಉದ್ಯಮಿ ಕುಂದಾಪುರದ ದೇವಲ್ಕುಂದ ಭಾಸ್ಕರ ಶೆಟ್ಟಿ ಅವರಿಗೆ ದಿವಂಗತ ಕಣಂಜಾರು ಆನಂದ ಶೆಟ್ಟಿ ಸ್ಮರಣಾರ್ಥ ಯಕ್ಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಂಟರವಾಣಿ ಸಂಪಾದಕರಾದ ಅಶೋಕ ಪಕ್ಕಳರವರು ನಿರೂಪಿಸಿದರು. ಬಂಟರ ಸಂಘದ ಅದ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿರವರು ಸ್ವಾಗತಿಸಿದರು. ಸಮಿತಿ ಕಾರ್ಯಧ್ಯಕ್ಷರಾದ ರವೀಂದ್ರನಾಥ ಭಂಡಾರಿಯವರು ಧನ್ಯವಾದ ಸಮರ್ಪಿಸಿದರು..

Leave a Reply

Your email address will not be published. Required fields are marked *

sixteen − twelve =