ಮುಕ್ತ ವಿ.ವಿ: ಬಿ.ಎ/ಬಿ.ಕಾಂ ಪೂರಕ ಮತ್ತು ಎಂ.ಬಿ.ಎ ಪರೀಕ್ಷೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಬಿ.ಎ/ಬಿ.ಕಾಂ ಪೂರಕ ಮತ್ತು ಎಂ.ಬಿ.ಎ ಸೆಮಿಸ್ಟರ್ ಪರೀಕ್ಷೆಗಳನ್ನು ಫೆಬ್ರವರಿ/ಮಾರ್ಚ್ ಮಾಹೆಯಲ್ಲಿ ದಿನಾಂಕ 13.03.2020 ರವರೆಗೆ ನಡೆಸಲಾಗಿದ್ದು ಕೋವಿಡ್-19ರ ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರದ ನಿರ್ದೇಶನದಂತೆ ಉಳಿದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.

ಮುಂದೂಡಲಾದ ಪರೀಕ್ಷೆಗಳನ್ನು ಯುಜಿಸಿಯ ಮಾರ್ಗ ಸೂಚನೆಯಂತೆ ಮತ್ತು ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಸೆಪ್ಟಂಬರ್ 1ರಿಂದ ಹಾಗೂ ಎಂ.ಬಿ.ಎ ಸೆಮಿಸ್ಟರ್ ಪರೀಕ್ಷೆಗಳನ್ನು ಸೆಪ್ಟಂಬರ್ 5 ರಿಂದ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ನಡೆಸಲಾಗುತ್ತದೆ.

ವೇಳಾಪಟ್ಟಿಯನ್ನು ವಿಶ್ವ ವಿದ್ಯಾನಿಲಯದ ವೆಬ್ಸೈಟ್ http://www.ksoumysuru.ac.in/ ಪ್ರಕಟಿಸಲಿದ್ದು, ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗುವಂತೆ ಉಡುಪಿ ಪ್ರಾದೇಶಿಕ ನಿರ್ದೇಶಕರಾದ ಡಾ.ಕೆ.ಪಿ.ಮಹಾಲಿಂಗಯ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

thirteen − nine =