ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಬೈಂದೂರು ಶಾಖಾ ವ್ಯವಸ್ಥಾಪಕ ಮಹೇಶ್ ಸುವರ್ಣ (32) ಸೋಮವಾರ ಶಾಖಾ ಕಚೇರಿಯಲ್ಲಿ ಕರ್ತವ್ಯ ನಿರತರಾಗಿದ್ದಾಗ ತೀವ್ರ ಹೃದಯಾಘಾತದಿಂದ ನಿಧನರಾದರು. ರಕ್ತದೊತ್ತಡದಲ್ಲಿ ಒಮ್ಮೆಲೇ ತೀವ್ರ ಕುಸಿತವಾದ ಕಾರಣ ಹೃಯಾಘಾತ ಸಂಭವಿಸಿತು ಎನ್ನಲಾಗಿದೆ.
ಬ್ರಹ್ಮಾವರದ ಇಂದಿರಾನಗರ ನಿವಾಸಿ ಶೀನ ಮರಕಾಲ ಅವರ ಪುತ್ರರಾದ ಮಹೇಶ್ ಐದು ತಿಂಗಳ ಹಿಂದೆ ಚಿಕ್ಕಮಗಳೂರು ಶಾಖೆಯಿಂದ ಇಲ್ಲಿಗೆ ಶಾಖಾಧಿಕಾರಿಯಾಗಿ ಬಡ್ತಿಹೊಂದಿ ಬಂದಿದ್ದರು. ಶಾಲಾ ದಿನಗಳಿಂದಲೂ ಕ್ರೀಡಾಪಟುವಾಗಿದ್ದ ಅವರು ಕೊಕ್ಕೋ ಮತ್ತು ಕ್ರಿಕೆಟ್ ಆಟದಲ್ಲಿ ಪರಿಣತಿ ಹೊಂದಿದ್ದರು. ಬ್ರಹ್ಮಾವರದ ಎಂಜೋಯ್ ಕ್ರಿಕೆಟರ‍್ಸ್ ತಂಡದ ಸದಸ್ಯರಾಗಿ ವಿಶೇಷ ಸಾಧನೆ ಮಾಡಿದ್ದರು. ಅವಿವಾಹಿತರಾಗಿರುವ ಅವರು ತಂದೆ, ತಾಯಿ, ಇಬ್ಬರು ಸಹೋದರರು ಮತ್ತು ಸಹೋದರಿಯನ್ನು ಅಗಲಿದ್ದಾರೆ. ಅವರ ಅಂತಿಮ ಸಂಸ್ಕಾರ ಮಂಗಳವಾರ ಬ್ರಹ್ಮಾವರದಲ್ಲಿ ನಡೆಯಿತು.