ಮುದೂರು: ಕಟ್ಟಡ ಕಾರ್ಮಿಕರ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕೃಷಿ ರಂಗದಲ್ಲಿ ಸುಧಾರಣೆಗಳನ್ನು ಜಾರಿಗೆ ತರುವ ಹೆಸರಿನಲ್ಲಿ ಕೇಂದ್ರ ಸರಕಾರ ಅಂಗೀಕರಿಸಿರುವ ಮೂರು ಹೊಸ ಕೃಷಿ ಕಾನೂನುಗಳು ರೈತ ವಿರೋಧಿಯಾಗಿದೆ. ಮಾತ್ರವಲ್ಲ ವ್ಯವಸಾಯ ರಂಗವನ್ನು ಕಬಳಿಸಲು ಹೊಂಚು ಹಾಕುತ್ತಿರುವ ಕಾಪೋ೯ರೇಟ್ ಕಂಪೆನಿಗಳ ಪರವಾಗಿದೆ ಸಿಐಟಿಯು ತಾಲೂಕು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ದೂರಿದರು. ಹಾಗೂ ಆ.9ರಂದು ನಡೆಯುವ ರೈತ, ಕಾಮಿ೯ಕ, ಕೂಲಿಕಾರರ ದೇಶ ವ್ಯಾಪಿ ಪ್ರತಿಭಟನೆಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡರು.

ಅವರು, ಮುದೂರು ಗ್ರಾಮದ ಉದಯ ನಗರ ಪ್ರದೇಶದ ಕಾಮಿ೯ಕರ ಸಭೆ ಉದ್ಘಾಟಿಸಿ ಮಾತನಾಡಿದರು.

ಕಾಮಿ೯ಕ ಮುಖಂಡ ವೆಂಕಟೇಶ್ ಕೋಣಿ. ಉಪಸ್ಥಿತರಿದ್ದರು. ಸ್ಥಳೀಯ ಕಾಮಿ೯ಕ ಮುಖಂಡ ಸಜಿ ಸ್ವಾಗತಿಸಿದರು, ಮಹೇಶ್ ವಂದಿಸಿದರು

Leave a Reply

Your email address will not be published. Required fields are marked *

15 + 7 =