ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ ಆಸರೆಯಲ್ಲಿ ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಉಳ್ಳೂರು ಮೂಕಾಂಬಿಕಾ ಐತಾಳ್ (ಮೂಕಜ್ಜಿ) ಕುರಿತಾದ ಆಂಗ್ಲಭಾಷಾ ಕೃತಿ ‘The Song Bird Of Ullor Mookambika Aithal’ ಕೃತಿಯನ್ನು ಗೀತಾನಂದ ಫೌಂಡೇಶ್‌ನ ಪ್ರವರ್ತಕ ಆನಂದ್ ಸಿ ಕುಂದರ್ ಅನಾವರಣಗೊಳಿಸಿದರು.
ಕೃತಿ ಅನಾವರಣ ಮಾಡಿ ಮಾತನಾಡಿದ ಆನಂದ್ ಸಿ ಕುಂದರ್, ಆಂಗ್ಲ ಭಾಷೆಯಲ್ಲಿ ಮೂಕಜ್ಜಿಯ ಬಗ್ಗೆ ಕೃತಿ ಮೂಡಿ ಬಂದಿರುವುದರಿಂದ ನಮ್ಮ ಪರಿಸರದಲ್ಲಿ ಮಾತ್ರವಲ್ಲದೇ ದೇಶ -ವಿದೇಶಗಳಲ್ಲಿಯೂ ಕೂಡಾ ಮೂಕಜ್ಜಿಯ ಬದುಕು – ಸಾಹಿತ್ಯ ಅನಾವರಣಗೊಳಲು ಸಾಧ್ಯ ಎಂದರು.
ಸಾಹಿತಿ ಡಾ. ಪಾರ್ವತಿ ಜಿ. ಐತಾಳ್ ಮಾತನಾಡಿ, ಕುಂದಾಪುರ ಮೂಕಜ್ಜಿ ಖ್ಯಾತಿಯ ಉಳ್ಳೂರು ಮೂಕಾಂಬಿಕಾ ಐತಾಳ್ ಅವರ ಬದುಕು ನಮಗೆಲ್ಲ ಪ್ರೇರಣೆ, ಅವರು ಬಾಲ ವಿಧವೆಯಾಗಿದ್ದರೂ ಜೊತೆಗೆ ಬಡತನ ಕಾಡುತ್ತಿದ್ದರೂ ಬದುಕಿನೂದಕ್ಕೂ ಅನುಭವಿಸಿದ ಕಷ್ಟ, – ನೋವುಗಳ ಮಧ್ಯ ಅವರ ಸಾಧನೆ, ಅನಕ್ಷರಸ್ಥೆ ಆಗಿದ್ದರೂ ಮೂಕಜ್ಜಿಯ ಕವನ ರಚನೆ ನಮ್ಮೊಳಗಿನ ಬದುಕನ್ನು ಜಾಗೃತಗೊಳಿಸುವ, ತಪ್ಪುಗಳನ್ನು ತಿದ್ದುವ ಕವನಗಳಾಗಿದ್ದವು ಎಂದು ನುಡಿದರು.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ.ಅರುಣ್ ಕುಮಾರ್ ಶೆಟ್ಟಿ, ಪಿ.ಡಿ.ಓ ಶೈಲಾ ಎಸ್ ಪೂಜಾರಿ, ಅಶ್ವಿನಿ ಐತಾಳ್, ಹಾಗೂ ಮತ್ತಿತ್ತರು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿದರು.