ಮೂಡುಬಿದಿರೆ ಆಳ್ವಾಸ್‌ನ ಹಳೇ ವಿದ್ಯಾರ್ಥಿನಿ ನಂದಿನಿ ಯುಪಿಎಸ್‌ಸಿ ಟಾಪರ್

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿನಿ, ಮೂಲತಃ ಕೋಲಾರದ ನಂದಿನಿ ಕೆ.ಆರ್ ಯುಪಿಎಸ್‌ಸಿನಲ್ಲಿ ದೇಶಕ್ಕೆ ಟಾಪರ್ ಆಗಿದ್ದಾರೆ.

Call us

Call us

2006ರಲ್ಲಿ ಕೋಲಾರದ ಚಿಣ್ಮಯಿ ಹೈಸ್ಕೂಲಿನಲ್ಲಿ ಶೇ.೯೬.೮೦ ಅಂಕಗಳಿಸಿ, ಪದವಿಪೂರ್ವ ಶಿಕ್ಷಣಕ್ಕೆ ಆಳ್ವಾಸ್‌ಗೆ ಸೇರಿದ ಈಕೆ 2008ರಲ್ಲಿ ಶೇ.94.83ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು. ಬಳಿಕ ಎಂ.ಎಸ್ ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ.
ಒಂದು ಲಕ್ಷ ಬಹುಮಾನ ಘೋಷಣೆ

ಆಳ್ವಾಸ್ ಪದವಿಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿನಿ ನಂದಿನಿ ಯುಪಿಎಸ್‌ಸಿ ಮೊದಲ ರ‍್ಯಾಂಕ್ ಪಡೆದಿರುವುದು ಸಂತಸ ತಂದುಕೊಟ್ಟಿದೆ. ಈಕೆಗೆ ಆಳ್ವಾಸ್ ಸಂಸ್ಥೆಯ ವತಿಯಿಂದ 1ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು. ಆಗಸ್ಟ್ ೧೫ರಂದು ಆಳ್ವಾಸ್ ಸಂಸ್ಥೆಯಿಂದ ನಡೆಯುವ ಸ್ವಾತಂತ್ರೋತ್ಸವದಲ್ಲಿ ನಂದಿಯವರನ್ನು ಗೌರವಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಘೋಷಿಸಿದ್ದಾರೆ.

Call us

Call us

 

Leave a Reply

Your email address will not be published. Required fields are marked *

three × 5 =