ಮೂಡ್ಲಕಟ್ಟೆ ಎಂಐಟಿ – ಮೈಕ್ರೋಸಾಫ್ಟ್ ಟ್ರೈನಿಂಗ್ ಪಾರ್ಟ್ನರ್ ಜೊತೆ ಶೈಕ್ಷಣಿಕ ಒಪ್ಪಂದ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಮತ್ತು ಪ್ರಸಿದ್ದ ಮೈಕ್ರೋಸಾಫ್ಟ್ನ ಟ್ರೈನಿಂಗ್ ಪಾರ್ಟ್ನರ್ ಕಂಪನಿಯು ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ತನ್ನ ಬೆಳವಣಗೆಯ ಚಟುವಟಿಕೆಗೆ ಸಾಕ್ಷಿಯಾಯ್ತು. ಈ ಒಪ್ಪಂದದಿಂದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯ ಮತ್ತು ಹೊಸ ತಂತ್ರಜ್ಞಾನ ಭರಿತ ಕೋರ್ಸ್ ಗಳನ್ನು ಕಲಿತು, ವಿಶ್ವದ ಪ್ರಸಿದ್ಧ ಸಾಫ್ಟ್ವೇರ್ ಕಂಪೆನಿಯಾದ ಮೈಕ್ರೋಸಾಫ್ಟ್ ನಿಂದ ಪ್ರಮಾಣಪತ್ರ ಪಡೆಯುವ ಅವಕಾಶವಿರುತ್ತದೆ.

ವಿದ್ಯಾರ್ಥಿಗಳು ಅಂಕಗಳಿಗೆ ಮಾತ್ರ ಸೀಮಿತರಾಗದೆ, ಉದ್ಯೋಗವಕಾಶಕ್ಕೆ ಮುಖ್ಯವಾಗಿರುವ, ಜ್ಞಾನವನ್ನ ವೃದ್ಧಿಗೊಳಿಸುವ ಚಟುವಟಿಕೆಗಲ್ಲಿ ಒಳಗೊಂಡು ಅಧ್ಯಯನ ಮಾಡುವ ಉದ್ದೇಶದಿಂದ ಈ ಒಪ್ಪಂದ ಬಹಳ ಪ್ರಮುಖ ಪಾತ್ರ ವಹಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಂಪನಿಯ ವತಿಯಿಂದ ಸಂದೀಪ್ ಜಿಯಾನ್ ಜತೇನಿ ಸಹಿ ಮಾಡಿದರು. ಕಾಲೇಜು ವತಿಯಿಂದ ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ ಸಹಿ ಮಾಡಿದರು. ಕಾಲೇಜಿನಲ್ಲಿ ಬಹಳ ವೇಗದಲ್ಲಿ ಆಗುತ್ತಿರುವ ಬೆಳವಣಿಗೆ, ಮತ್ತು ಇದಕ್ಕೆ ಅನುಗುಣವಾಗಿ ಈ ವರ್ಷದಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ವಿದ್ಯಾರ್ಥಿಗಗೆ ದೊರಕಿದ ಉದ್ಯೋಗವಕಾಶಕ್ಕೆ ಕಾಲೇಜಿನ ಅಧ್ಯಕ್ಷ ಸಿದ್ದಾರ್ಥ ಜೆ ಶೆಟ್ಟಿ ಸಂತೋಷ ವ್ಯಕ್ತಪಡಿಸುತ್ತ, ಎಲ್ಲಾ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *

1 + five =