ಮೂಡ್ಲಕಟ್ಟೆ ಎಂಐಟಿ: ಸಂಸ್ಥಾಪಕರ ದಿನಾಚರಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು.

Call us

Call us

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಸಿದ್ಢಾರ್ಥ ಜೆ ಶೆಟ್ಟಿ ಕಾಲೇಜಿನ ಸಂಸ್ಥಾಪಕರಾದ ಮಾಜಿ ಸಂಸದ ಐ ಎಂ ಜಯರಾಮ ಶೆಟ್ಟಿಯವರ ಪುತ್ಹಳಿಗೆ ಹಾರಾರ್ಪಣೆ ಮಾಡಿ ಗೌರವವನ್ನು ಸಲ್ಲಿಸಿದರು.

Call us

Call us

ಸಂಸ್ಥಾಪಕರ ಸಾಧನೆ ಮತ್ತು ಸೇವೆಗಳ ಸಾರಾಂಶ ವಿರುವ ವಿಡಿಯೊವನ್ನ ಪ್ರದರ್ಶಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ ಮಾತನಾಡಿ, ದಿ|ಜಯರಾಮ ಶೆಟ್ಟಿ ಇವರ ಜೊತೆಗಿನ ತಮ್ಮ ಒಡನಾಟದ ಮತ್ತು ಅನುಭವವನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಕಾಲೇಜಿನ ಬೆಳವಣಿಗೆಯಲ್ಲಿ ಶ್ರಮಿಸಿದ ಸಿಬ್ಬಂದಿಗಳಿಗೆ ಐಎಂಜೆ ಪ್ರಶಸ್ತಿ ಮತ್ತು ಫಲಕ ಗಳನ್ನ ನೀಡಿ ಸನ್ಮಾನಿಸಲಾಯಿತು. ಜೊತೆಗೆ ಕಾಲೇಜಿನ ವಿಧ್ಯಾರ್ಥಿಗಳಿಗೆ ಆಯೋಜಿಸಲಾದ ಪೆನ್ಸಿಲ್ ಉಪಯೋಗಿಸಿ ಸಂಸ್ಥಾಪಕರ ಭಾವಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ಕಾಲೇಜಿನ ಅಕಾಡೆಮಿಕ್ ಡೀನ್ ಡಾ. ಪ್ರತಿಭಾ ಪಟೇಲ್ ಮತ್ತು ಪ್ಲೇಸ್ಮೆಂಟ್ ಡೀನ್ ಸತ್ಯನಾರಾಯಣ ವಿಭಾಗದ ಮುಖ್ಯಸ್ಥರು , ಸಿಬಂದಿ ವರ್ಗ ಹಾಗು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎಮ್. ಬಿ. ಎ. ವಿಭಾಗದ ವಿದ್ಯಾರ್ಥಿಗಳಾದ ಅನಂತ ಸ್ವಾಗತಿಸಿ, ಸಿಂಧು ಶೆಟ್ಟಿ ವಂದಿಸಿದರು, ಮುಗ್ಧ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

1 + four =