ಮೂಡ್ಲಕಟ್ಟೆ ಎಮ್. ಐ. ಟಿ ಮತ್ತು ಮೆಕೇನ್ ಇನ್ನೋವೇಶನ್ಸ್ ಕಂಪನಿ ನಡುವೆ ಒಡಂಬಡಿಕೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಮತ್ತು ಚೆನ್ನೈ ಮೂಲದ ಪ್ರತಿಷ್ಠಿತ ಕಂಪೆನಿಯಾದ ಮೆಕೇನ್ ಇನ್ನೋವೇಶನ್ಸ್ ನಡುವೆ, ಕಾಲೇಜಿನಲ್ಲಿ ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಲ್ಯಾಬೋರೇಟರಿ ಪ್ರಾರಂಭಿಸುವ ಕಾರ್ಯಕ್ರಮದಡಿ ಮಹತ್ವದ ಒಪ್ಪಂದಕ್ಕೆ ಕಾಲೇಜಿನ ಚೇರ್ಮನ್, ಸಿದ್ದಾರ್ಥ್ ಜೆ ಶೆಟ್ಟಿ ಮತ್ತು ಕಂಪನಿಯ ವಿಷ್ಣು ಟಿ ಎನ್ ರವರು ಸಹಿ ಮಾಡಿದರು.

Call us

ಈ ಒಪ್ಪಂದದ ಮೂಲಕ ಕಾಲೇಜಿನ ವಿದ್ಯಾರ್ಥಿಗಳ ಕೌಶಲ್ಯತೆಯನ್ನು ಹೆಚ್ಚಿಸಲು ಡಿಜಿಟಲ್ ತಂತ್ರಜ್ಞಾನದ ಮೂಲಕ ವರ್ಚುಯಲ್ ರಿಯಾಲಿಟಿ, ಮಿಕ್ಸೆಡ್ ರಿಯಾಲಿಟಿ ಮತ್ತು ಆಗ್ಮೆಂಟೆಡ್ ರಿಯಾಲಿಟಿ ತರಬೇತಿ ಕಾರ್ಯಕ್ರಮ ನಡೆಸಲಾಗುವುದು. ಅಲ್ಲದೆ 3ಡಿ ಪ್ರಿಂಟಿಂಗ್ ಮತ್ತು ಕ್ಯಾಪಿಡ್ ಪ್ರೊಟೋಟೈಪ್ ನಂತಹ ತರಬೇತಿಗಳನ್ನ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಲಾಭ ಪಡೆಯಲಿದ್ದಾರೆ. ಹಾಗೆಯೇ ಕ್ಯಾಂಪಸ್ ಸಂದರ್ಶನ ದ ಮೂಲಕ ಕಂಪನಿಗಳಲ್ಲಿ ಉದ್ಯೋಗ ಪಡೆಯಲಿಕ್ಕೆ ಬೇಕಾಗುವ ಅಗತ್ಯ ವಿಷಯಗಳ ಮೇಲೆ ಅಧ್ಯಯನ ಮಾಡಲು ಈ ಒಪ್ಪಂದ ಬಹಳ ಉಪಯೋಗಕಾರವಾಗಲಿದೆ,  ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸಿ ಅವರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಸಿ, ಕಾಲೇಜು ಮತ್ತು ಕಂಪನಿಗಳ ಸಂಪರ್ಕ ಉತ್ತಮವಾಗಿಸಲು ಇದೊಂದು ಪ್ರಯೋಜನಕಾರಿ ಬೆಳವಣಿಗೆ ಆಗಲಿದೆ ಎಂದು ಸಿದ್ದಾರ್ಥ್ ಜೆ ಶೆಟ್ಟಿ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.

ಕಂಪನಿ ವತಿಯಿಂದ ವಿಷ್ಣು ಟಿ ಯು ಮತ್ತು ವಿನೋದ್ ಕುಮಾರ್ ಹಾಗೆಯೆ ಕಾಲೇಜು ಕಡೆಯಿಂದ ಸಿದ್ದಾರ್ಥ್ ಶೆಟ್ಟಿ ಜೊತೆಯಲ್ಲಿ ಡಾ. ಚಂದ್ರ ರಾವ್ ಮದಾನೆ, ಪ್ರೊ ಮೆಲ್ವಿನ್ ಡಿ ಸೋಜಾ ಮತ್ತು ಪ್ರೊ ಧ್ರುವ ಆಚಾರ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

5 × 3 =