ಮೃತ ಮಕ್ಕಳ ಮನೆಯಲ್ಲಿ ಮಡುಗಟ್ಟಿದ ಮೌನ, ಗಂಗೊಳ್ಳಿ, ತಲ್ಲೂರಿನಲ್ಲಿ ಅಂತಿಮ ವಿಧಿ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತ್ರಾಸಿ ಮೋವಾಡಿ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಮಡಿದ ಮಕ್ಕಳ ಪೋಷಕರಲ್ಲಿ ಒಬ್ಬರು ವಿದೇಶದಿಂದ ಊರಿಗೆ ಮರಳಿದ್ದು, ಮತ್ತೊಬ್ಬರಾದ ಒಲ್ವಿನ್ ಒಲವೇರಾ ಬುಧವಾರ ಸಂಜೆ ಊರಿಗೆ ಮರಳಲಿದ್ದಾರೆ.

Click Here

Call us

Call us

Visit Now

ಮೃತ ಮಕ್ಕಳ ಕುಟುಂಬದ ಮನೆಯಲ್ಲಿ ಮೌನ ಮಡುಗಟ್ಟಿದೆ. ಶಾಲೆಯಿಂದ ಮನೆಗೆ ನಗುನಗುತ್ತಾ ಬರುತ್ತಾರೆ ಎಂದು ಕಾದಿದ್ದ ನಾವು ಮಕ್ಕಳ ಶವ ಎದುರುಗೊಳ್ಳುವ ಪರೀಸ್ಥಿತಿ ಬಂತು ಎಂದು ತಾಯಂದಿರು ಅವತ್ತುಕೊಳ್ಳುತ್ತಿದ್ದಾರೆ.

Click here

Click Here

Call us

Call us

ಮಂಗಳವಾರ ರಾತ್ರಿಯವರೆಗೆ ತನ್ನ ಮಗ ಗಾಯಗೊಂಡಿದ್ದು ಚೇತರಿಸಕೊಂಡು ಬರುತ್ತಾನೆ ಎಂದು ನಂಬಿದ್ದ ಹೆಮ್ಮಾಡಿ ನಿವಾಸಿ ಶಾಂತ ಅವರಿಗೆ ತಡ ರಾತ್ರಿ ಮಗ ರಾಯ್‌ಸ್ಟನ್ ನಿಧವಾದ ಸುದ್ದಿ ತಿಳಿದು ಆಘಾತಗೊಂಡಿದ್ದು, ಮೌನವಾಗಿ ರೋಧಿಸುತ್ತಿದ್ದಾರೆ. ಇವರ ಪತಿ ವಿನೋದ್ ಲೋಬೋ ವಿದೇಶದಿಂದ ಆಗಮಿಸಿದ್ದು, ಮನೆಯಲ್ಲಿ ಮೌನ ಮಡುಗಟ್ಟಿದೆ. ಯಾರೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಮೃತ ಕುಟುಂಬದ ಎಲ್ಲಾ ಮನೆಯಲ್ಲೂ ಸಂಬಂಧಿರು ಸಾಂತ್ವಾನ ಹೇಳುವ ಸ್ಥಿತಿ ಇತ್ತು. ಮಕ್ಕಳ ಪೋಷಕರು ಅನ್ನ ನೀರುಬಿಟ್ಟು ರೋಧಿಸುತ್ತಿದ್ದಾರೆ. ಗುರುವಾರ ಮೃತ ಮಕ್ಕಳ ಅಂತ್ಯ ಸಂಸ್ಕಾರ ಕ್ರೈಸ್ತ ಧರ್ಮದ ವಿಧಿವಿಧಾನಗಳಂತೆ ತಲ್ಲೂರು ಹಾಗೂ ಗಂಗೊಳ್ಳಿಯಲ್ಲಿ ಜರುಗಲಿದೆ.

Leave a Reply

Your email address will not be published. Required fields are marked *

twenty + ten =