ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯ ಮೆಕ್ಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಅರಣ್ಯ ಸಮಿತಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ ಗಿಡ ನೆಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುದೂರು ಬ್ಲಾಕ್ ಮೀಸಲು ಅರಣ್ಯ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಿದ ಇಂಗು ಗುಂಡಿಗಳ ಮೇಲೆ ಮಾವು, ಹಲಸು, ಚಾರ, ಹೊಂಗೆ ಮತ್ತು ಇನ್ನಿತರ ವಿವಿಧ ಕಾಡು ಜಾತಿಯ ಬೀಜ ಬಿತ್ತನೆ ಕಾರ್ಯಕ್ರಮ ಮಾಡಲಾಯಿತು. ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ಸುನಿಲ್ ವನಮಹೋತ್ಸವದ ಮಾಹಿತಿ ನೀಡಿದರು.
ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಲಕ್ಷ್ಮಣ್ ಶೆಟ್ಟಿ, ಸದಸ್ಯೆ ಭಾರತಿ ಶೆಟ್ಟಿ, ಅರಣ್ಯ ಸಮಿತಿ ಅಧ್ಯಕ್ಷರಾದ ಸುರೇಂದ್ರ ನಾಯ್ಕ್, ಶಾಲಾ ಸ್ಥಾಪಕ ಅಧ್ಯಕ್ಷ ಎಂ. ಜೆ. ಬೇಬಿ, ಸ್ಥಳ ದಾನಿಗಳಾದ ನಾರಾಯಣ ಪೂಜಾರಿ ಮೆಕ್ಕೆ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ರಾಧಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್, ಶಾಲಾ ಮುಖ್ಯ ಶಿಕ್ಷಕಿ ದೇವಕಿ, ಸಹ ಶಿಕ್ಷಕಿ ನೇತ್ರ, ಎಸ್.ಡಿ.ಎಂಸಿ ಮಾಜಿ ಅಧ್ಯಕ್ಷೆ ಮಹಾಬಲ ಪೂಜಾರಿ, ಅರಣ್ಯ ಇಲಾಖೆಯ ಸುನಿಲ್ ಮತ್ತು ಹರಿಪ್ರಸಾದ್, ವಿದ್ಯಾಬಿಮಾನಿ ರಾಮ ಶೆಟ್ಟಿ ಅತ್ತಿಕಾರ್, ಹಣಿ ಸಿಂಸಲ್, ಭಾಸ್ಕರ್ ನಾಯ್ಕ್, ಹಳೆ ವಿದ್ಯಾರ್ಥಿಗಳಾದ ಗುರುರಾಜ್ ಪೂಜಾರಿ ಮೆಕ್ಕೆ, ರಮೇಶ್ ಪೂಜಾರಿ ಮೆಕ್ಕೆ, ವಿದ್ಯಾರ್ಥಿನಿ ಸಾನ್ವಿ ಉಪಸ್ಥಿತರಿದ್ದರು. ಸುನಿಲ್ ಅವರು ಸ್ವಾಗತಿಸಿ, ರಾಮ ಶೆಟ್ಟಿ ಅತ್ತಿಕಾರ್ ವಂದಿಸಿದರು.